‘ಜಾಕಿ’ ಸಿನಿಮಾ ನೋಡಿದ ಅಪ್ಪು ಅಭಿಮಾನಿಗಳ ಭಾವುಕ ಮಾತು
Jackie Movie: ಅಪ್ಪು ನಟಿಸಿದ್ದ 14 ವರ್ಷಗಳ ಹಿಂದಿನ ಸಿನಿಮಾ ‘ಜಾಕಿ’ ಇದೀಗ ಮರು ಬಿಡುಗಡೆ ಆಗಿದೆ. ಸಿನಿಮಾ ನೋಡಿದ ಅಭಿಮಾನಿಗಳು ಭಾವುಕವಾಗಿ ಮಾತನಾಡಿದ್ದಾರೆ.
ದಿವಂಗತ ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜಾಕಿ’ ಸಿನಿಮಾ ಇಂದು (ಮಾರ್ಚ್ 15) ಮರು ಬಿಡುಗಡೆ ಆಗಿದೆ. ಅಪ್ಪು ಅಭಿಮಾನಿಗಳು ಸಂಭ್ರಮದಿಂದ ‘ಜಾಕಿ’ ಸಿನಿಮಾವನ್ನು ಮತ್ತೊಮ್ಮೆ ಬರಮಾಡಿಕೊಂಡಿದ್ದಾರೆ. 14 ವರ್ಷದ ಹಿಂದೆ ಬಿಡುಗಡೆ ಆಗಿದ್ದ ‘ಜಾಕಿ’ ಸಿನಿಮಾವನ್ನು ಅಭಿಮಾನಿಗಳು ಮತ್ತೊಮ್ಮೆ ನೋಡಿ ಖುಷಿ ಪಡುತ್ತಿದ್ದಾರೆ. ಅಗಲಿದ ತಮ್ಮ ಮೆಚ್ಚಿನ ನಾಯಕ ನಟನನ್ನು ತೆರೆಯ ಮೇಲೆ ಮತ್ತೊಮ್ಮೆ ಕಣ್ಣು ತುಂಬಿಕೊಳ್ಳುತ್ತಿದ್ದಾರೆ. ಸಿನಿಮಾ ಮರು ಬಿಡುಗಡೆ ಆಗಿರುವ ಖುಷಿಯ ಜೊತೆಗೆ ಅಪ್ಪು ಇನ್ನಿಲ್ಲ ಎಂಬ ನೋವನ್ನೂ ಅನುಭವಿಸುತ್ತಿದ್ದಾರೆ. ‘ಜಾಕಿ’ ಸಿನಿಮಾ ಮರು ಬಿಡುಗಡೆ ನೋಡಿದ ಕೆಲವು ಅಭಿಮಾನಿಗಳ ಭಾವುಕ ಮಾತುಗಳು ಇಲ್ಲಿವೆ…
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Mar 15, 2024 11:23 AM
Latest Videos