ಬೆಂಗಳೂರು ಹೆಸರು ಕೈಬಿಟ್ಟು ಪಾಸ್​ವರ್ಡ್ ಬದಲಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ಅರ್ಥವಾಯ್ತಾ?

Ashwini Puneeth Rajkumar: ಅಶ್ವಿನಿ ಪುನೀತ್ ರಾಜ್​ಕುಮಾರ್ ತಮ್ಮ ಲ್ಯಾಪ್​ಟಾಪ್​ನ ಪಾಸ್​ವರ್ಡ್​ ಬದಲಾಯಿಸಿದ್ದಾರೆ. ‘Bangalore’ ಹೆಸರನ್ನು ತೆಗೆದುಹಾಕಿದ್ದಾರೆ ಏಕೆ?

ಬೆಂಗಳೂರು ಹೆಸರು ಕೈಬಿಟ್ಟು ಪಾಸ್​ವರ್ಡ್ ಬದಲಿಸಿದ ಅಶ್ವಿನಿ ಪುನೀತ್ ರಾಜ್​ಕುಮಾರ್: ಅರ್ಥವಾಯ್ತಾ?
Follow us
ಮಂಜುನಾಥ ಸಿ.
|

Updated on:Mar 14, 2024 | 11:10 AM

ಐಪಿಎಲ್ (IPL) ಫೀವರ್ ಶುರುವಾಗುವ ಮುನ್ನವೇ ಆರ್​ಸಿಬಿ (RCB) ಫೀವರ್ ಶುರುವಾಗಿದೆ. ಪ್ರತಿ ವರ್ಷದಂತೆಯೇ ಈ ವರ್ಷವೂ ಆರ್​ಸಿಬಿ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ. ನಾಳೆ (ಮಾರ್ಚ್ 15) ಆರ್​ಸಿಬಿ ಅನ್​ಬಾಕ್ಸಿಂಗ್ ಇವೆಂಟ್ ಇದ್ದು, ಕಾರ್ಯಕ್ರಮ ಅದ್ಧೂರಿಯಾಗಿ ನಡೆಯಲಿದೆ. ಇದರ ನಡುವೆ ಆರ್​ಸಿಬಿ ಸಹ ಈಗಾಗಲೇ ಪ್ರೊಮೋನಲ್ ವಿಡಿಯೋಗಳ ಮೂಲಕ ಈ ಬಾರಿ ಟೀಂನಲ್ಲಿ ಆಗಲಿರುವ ಮಹತ್ತರವಾದ ಬದಲಾವಣೆ ಬಗ್ಗೆ ಸುಳಿವು ನೀಡುತ್ತಿದೆ. ರಿಷಬ್ ಶೆಟ್ಟಿ, ‘ಕಾಂತಾರ’ ಶಿವನ ಅವತಾರದಲ್ಲಿ ಆರ್​ಸಿಬಿ ಜಾಹೀರಾತಿನಲ್ಲಿ ಈಗಾಗಲೇ ಕಾಣಿಸಿಕೊಂಡಿದ್ದಾರೆ. ಇದೀಗ ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಸಹ ಆರ್​ಸಿಬಿ ಕುಟುಂಬ ಸೇರಿಕೊಂಡಿದ್ದಾರೆ.

ಆರ್​ಸಿಬಿ, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದು, ವಿಡಿಯೋನಲ್ಲಿ ಅಶ್ವಿನಿ ಪುನೀತ್ ರಾಜ್​ಕುಮಾರ್ ಕಾಣಿಸಿಕೊಂಡಿದ್ದಾರೆ. ಅಶ್ವಿನಿ ಪುನೀತ್ ರಾಜ್​ಕುಮಾರ್, ತಮ್ಮ ಲ್ಯಾಪ್​ಟ್ಯಾಪ್​ನ ಪಾಸ್​ವರ್ಡ್ ಬದಲಾಯಿತುತ್ತಿರುತ್ತಾರೆ. ವಿಡಿಯೋನಲ್ಲಿ ಮೊದಲಿಗೆ ಅಣ್ಣಾವ್ರ ಚಿತ್ರ ತೋರಿಸಲಾಗುತ್ತದೆ, ಬಳಿಕ ಪುನೀತ್​ರ ಸಣ್ಣ ಪುತ್ಥಳಿ ತೋರಿಸಲಾಗುತ್ತದೆ. ಬಳಿಕ ಅಶ್ವಿನಿ ಅವರು ಲ್ಯಾಪ್​ಟಾಪ್​ನಲ್ಲಿ ‘ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್’ ಎಂದು ಇಂಗ್ಲೀಷ್​ನಲ್ಲಿ ಪಾಸ್​ವರ್ಡ್ ಅಪ್​ಡೇಟ್ ಮಾಡುತ್ತಾರೆ. ಆದರೆ ಆ ಪಾಸ್​ವರ್ಡ್​ ಅನ್ನು ಲ್ಯಾಪ್​ಟಾಪ್ ಅಕ್ಸೆಪ್ಟ್ ಮಾಡದೆ, ‘ಹಳೆಯ ಪಾಸ್​ವರ್ಡ್​ ಅನ್ನು ಮತ್ತೊಮ್ಮೆ ಬಳಸುವಂತಿಲ್ಲ’ ಎನ್ನುತ್ತದೆ. ಆಗ ಅಶ್ವಿನಿ ಅವರು ‘ಬ್ಯಾಂಗಲೂರ್’ (Bangalore) ಅನ್ನು ಅಳಿಸಿ ಹೊಸ ಪಾಸ್​ವರ್ಡ್​ ಸೆಟ್ ಮಾಡುತ್ತಾರೆ. ಬಳಿಕ ಕ್ಯಾಮೆರಾ ಕಡೆ ತಿರುಗಿ ‘ಅರ್ಥವಾಯ್ತಾ?’ ಎಂದು ಕೇಳುತ್ತಾರೆ.

ಇದನ್ನೂ ಓದಿ:ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಅರ್ಧಶತಕ ಗಳಿಸಿದ 5 ಆಟಗಾರರು

ಮಾರ್ಚ್ 15ರಂದು ಅದ್ಧೂರಿಯಾಗಿ ನಡೆಯಲಿರುವ ಆರ್​ಸಿಬಿ ಅನ್​ಬಾಕ್ಸಿಂಗ್ ಇವೆಂಟ್​ನ ಪ್ರಚಾರ ಜಾಹೀರಾತು ಇದಾಗಿದೆ. ಇಷ್ಟು ದಿನ ಆರ್​ಸಿಬಿ ಹೆಸರು ‘ರಾಯಲ್ ಚಾಲೆಂಜರ್ಸ್ ಬ್ಯಾಂಗಲೂರ್’ ಎಂದಿತ್ತು. ಆದರೆ ಅದನ್ನು ಈ ಬಾರಿ ಬದಲಾಯಿಸಲಾಗುತ್ತಿದ್ದು, ಇನ್ನು ಮುಂದೆ ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ (Royal Challengers Bengaluru) ಎಂದು ಮಾಡಲಾಗುತ್ತಿದೆ. ಆರ್​ಸಿಬಿ ಅನ್​ಬಾಕ್ಸಿಂಗ್ ಇವೆಂಟ್​ನಲ್ಲಿ ಈ ಬದಲಾವಣೆ ಮಾಡಲಾಗುತ್ತದೆ. ಕಳೆದ ಬಾರಿ ಈ ಕಾರ್ಯಕ್ರಮ ಬಹು ಅದ್ಧೂರಿಯಾಗಿ ನಡೆದಿತ್ತು. ಭಾರಿ ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಅಭಿಮಾನಿಗಳ ಆರ್ಭಟ್ಟಕ್ಕೆ ಸ್ಟೇಡಿಯಂನಲ್ಲಿ ಕಂಪನವೇ ಎದ್ದಿತ್ತು. ಈ ಬಾರಿಯೂ ಸಹ ಅಷ್ಟೆ ಅದ್ಧೂರಿಯಾಗಿ ಕಾರ್ಯಕ್ರಮ ನಡೆಯುವ ಸಾಧ್ಯತೆ ಇದೆ.

ಐಪಿಎಲ್ 2024 ರ ಮೊದಲ ಪಂದ್ಯ ಮಾರ್ಚ್ 22ರಂದು ನಡೆಯಲಿದೆ. ಮೊದಲ ಪಂದ್ಯವೇ ಆರ್​ಸಿಬಿ ಹಾಗೂ ಚೆನ್ನೈ ನಡುವೆ ನಡೆಯಲಿದೆ. ಸುಮಾರು ಒಂದು ತಿಂಗಳ ವರೆಗೆ ಪಂದ್ಯಾವಳಿ ನಡೆಯಲಿದೆ. ಕಳೆದ ಕೆಲ ಸೀಸನ್​ನಿಂದ ಹೊಂಬಾಳೆ ಫಿಲಮ್ಸ್​ನವರು ಆರ್​ಸಿಬಿ ಜೊತೆ ಪಾರ್ಟನರ್ ಆಗಿದ್ದು, ಆರ್​ಸಿಬಿಯ ಸೋಷಿಯಲ್ ಮೀಡಿಯಲಾ ಕಂಟೆಂಟ್ ಅನ್ನು ನೋಡಿಕೊಳ್ಳುತ್ತಿದ್ದಾರೆ. ಇದೀಗ ಹೊಂಬಾಳೆಯವರೇ ರಿಷಬ್ ಶೆಟ್ಟಿ, ಅಶ್ವಿನಿ ಪುನೀತ್ ರಾಜ್​ಕುಮಾರ್ ಅವರ ವಿಡಿಯೋ ನಿರ್ಮಿಸಿ ಅಪ್​ಲೋಡ್ ಮಾಡಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:10 am, Thu, 14 March 24

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮುನಿರತ್ನ ಮೇಲೆ ಒತ್ತಡ: ವಿಜಯೇಂದ್ರ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಸಿಟಿ ರವಿ ಬಂಧನ ಕೇಸ್: ಸಿಪಿಐನ ಅಮಾನತು ಮಾಡಿದ್ಯಾಕೆ? ಕಾರಣ ಕೊಟ್ಟ ಸಿಎಂ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
ಡಿ 31ರಿಂದ ಬಸ್​ಗಳು ಸಂಚರಿಸುವುದಿಲ್ಲ: ಪ್ರಯಾಣಿಕರಿಗೆ ಕರಪತ್ರ ಹಂಚಿಕೆ
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
‘ಮ್ಯಾಕ್ಸ್’ ಸಿನಿಮಾ ನೋಡಿದ್ರೆ ನಾಲ್ಕು ಕ್ವಾಟ್ರು ಹೊಡೆದ ಕಿಕ್ಕು’
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಮುನಿರತ್ನ ಘಟನೆ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಡಾ ಮಂಜುನಾಥ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಇಡೀ ಬಿಗ್ ಬಾಸ್ ಮನೆಯಲ್ಲಿ ರಂಪಾಟ ಶುರು ಮಾಡಿದ ರಜತ್
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಕುಡಿದ ಅಮಲಿನಲ್ಲಿ ಬೈಕ್​ಗೆ ಟ್ರಕ್ ಡಿಕ್ಕಿ;3 ವರ್ಷದ ಮಗು ಸೇರಿ ಇಬ್ಬರು ಸಾವು
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಬಿಜೆಪಿ ಶಾಸಕ ಮುನಿರತ್ನಗೆ ಬಿತ್ತು ಮೊಟ್ಟೆ ಏಟು: ಇಲ್ಲಿದೆ ನೋಡಿ ವಿಡಿಯೋ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
ಕೆನ್-ಬೇತ್ವಾ ನದಿ ಜೋಡಣೆ ಯೋಜನೆಗೆ ಮೋದಿ ಶಂಕುಸ್ಥಾಪನೆ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ
Video: ಕಜಾಕಿಸ್ತಾನದಲ್ಲಿ 110 ಮಂದಿ ಪ್ರಯಾಣಿಕರಿದ್ದ ವಿಮಾನ ಪತನ