Namratha Gowda: ವಿಶೇಷ ಡ್ಯಾನ್ಸ್ ಮೂಲಕ ‘ಯುವ’ ತಂಡಕ್ಕೆ ಬೆಂಬಲ ಕೊಟ್ಟ ನಮ್ರತಾ-ಕಿಶನ್
ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ ‘ಯುವ’ ಸಿನಿಮಾ ಮೂಡಿ ಬಂದಿದೆ. ಮಾರ್ಚ್ 29ರಂದು ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾನ ನಿರ್ಮಾಣ ಮಾಡಿದೆ. ಯುವ ರಾಜ್ಕುಮಾರ್ ಹಾಗೂ ಸಪ್ತಮಿ ಗೌಡ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ‘ಕವಿತೆ..’ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಈ ಹಾಡಿಗೆ ನಮ್ರತಾ ಹಾಗೂ ಕಿಶನ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ನಮ್ರತಾ ಗೌಡ (Namratha Gowda) ಅವರ ಖ್ಯಾತಿ ಹೆಚ್ಚಾಗಿದೆ. ಇದಕ್ಕೆ ಕಾರಣ ಆಗಿದ್ದು ‘ಬಿಗ್ ಬಾಸ್ ಕನ್ನಡ ಸೀಸನ್ 10’. ಫಿನಾಲೆಗೂ ಮೊದಲು ಅವರು ಬಿಗ್ ಬಾಸ್ ಮನೆಯಿಂದ ಎಲಿಮಿನೇಟ್ ಆದರು. ಬಿಗ್ ಬಾಸ್ನಿಂದ ಹೊರ ಬಂದ ಬಳಿಕ ತಮಗೆ ಸಿಕ್ಕ ಜನಪ್ರಿಯತೆ ನೋಡಿ ಅವರಿಗೆ ಖುಷಿಯಾಗಿದೆ. ಈಗ ಅವರು ‘ಯುವ’ ತಂಡವನ್ನು ಬೆಂಬಲಿಸಿ ಡ್ಯಾನ್ಸ್ ಮಾಡಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದೆ. ನಮ್ರತಾಗೆ ಕಿಶನ್ ಬಿಳಗಲಿ ಸಾಥ್ ನೀಡಿದ್ದಾರೆ.
ಸಂತೋಷ್ ಆನಂದ್ರಾಮ್ ನಿರ್ದೇಶನದಲ್ಲಿ ‘ಯುವ’ ಸಿನಿಮಾ ಮೂಡಿ ಬಂದಿದೆ. ಮಾರ್ಚ್ 29ರಂದು ಸಿನಿಮಾ ರಿಲೀಸ್ ಆಗಲಿದೆ. ಹೊಂಬಾಳೆ ಫಿಲ್ಮ್ಸ್ ಈ ಸಿನಿಮಾನ ನಿರ್ಮಾಣ ಮಾಡಿದೆ. ಯುವ ರಾಜ್ಕುಮಾರ್ ಹಾಗೂ ಸಪ್ತಮಿ ಗೌಡ ಈ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಯುವಗೆ ಇದು ಮೊದಲ ಸಿನಿಮಾ. ಈ ಚಿತ್ರದ ‘ಕವಿತೆ..’ ಹಾಡು ಇತ್ತೀಚೆಗೆ ಬಿಡುಗಡೆಯಾಗಿ ಮೆಚ್ಚುಗೆ ಪಡೆದಿದೆ. ಈ ಹಾಡಿಗೆ ನಮ್ರತಾ ಹಾಗೂ ಕಿಶನ್ ಸಖತ್ ಆಗಿ ಡ್ಯಾನ್ಸ್ ಮಾಡಿದ್ದಾರೆ.
ನಮ್ರತಾ ಡ್ಯಾನ್ಸ್ ವಿಡಿಯೋ
View this post on Instagram
ಕಿಶನ್ ಹಾಗೂ ನಮ್ರತಾ ಇಬ್ಬರಿಗೂ ಹಾಡಿನ ಬಗ್ಗೆ ವಿಶೇಷ ಪ್ರೀತಿ ಇದೆ. ಇವರು ಒಟ್ಟಾಗಿ ಹೆಜ್ಜೆ ಹಾಕಿದರೆ ಎಲ್ಲರ ಗಮನ ಅತ್ತ ಹೋಗೋದು ಪಕ್ಕಾ. ಈಗ ಅವರ ಹೊಸ ಡ್ಯಾನ್ಸ್ ಗಮನ ಸೆಳೆದಿದೆ. ಈ ಡ್ಯಾನ್ಸ್ಗೆ ಸಪ್ತಮಿ ಗೌಡ, ಹಿತಾ ಚಂದ್ರಶೇಖರ್ ಸೇರಿ ಅನೇಕ ಸೆಲೆಬ್ರಿಟಿಗಳು ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ. ಈ ಮೊದಲು ಕೂಡ ಕಿಶನ್ ಹಾಗೂ ನಮ್ರತಾ ಗೌಡ ಕಾಂಬಿನೇಷನ್ನಲ್ಲಿ ಹಲವು ಡ್ಯಾನ್ಸ್ಗಳು ಮೂಡಿ ಬಂದಿದ್ದವು.
ಇದನ್ನೂ ಓದಿ: ಲೈವ್ನಲ್ಲಿ ನಮ್ರತಾ ಗೌಡ ಅಂದ ಹೊಗಳಿದ ಕಾರ್ತಿಕ್ ಮಹೇಶ್; ವಿಡಿಯೋ ವೈರಲ್
ಕಿಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 7’ರಲ್ಲಿ ಸ್ಪರ್ಧಿ ಆಗಿದ್ದರು. ಅಲ್ಲಿಯೂ ಅವರು ಡ್ಯಾನ್ಸ್ ಮಾಡಿ ಎಲ್ಲರ ಗಮನ ಸೆಳೆದಿದ್ದರು. ಅವರು ಫಿನಾಲೆಯಲ್ಲಿ ಗೆಲ್ಲೋಕೆ ಅವರಿಗೆ ಸಾಧ್ಯವಾಗಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 11:57 am, Thu, 14 March 24