ಮೈಸೂರಿನ ದಮ್ಮನಕಟ್ಟೆಗೆ ಸಫಾರಿಗೆ ತೆರಳಿ ಪ್ರವಾಸಿಗಳ ಎದುರೇ ಹುಲಿಯೊಂದು ಕಾಡುಹಂದಿಯನ್ನು ಬೆನ್ನಟ್ಟಿ ಹಿಡಿಯಿತು!

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 31, 2022 | 3:33 PM

ಪ್ರವಾಸಿಗರಲ್ಲಿ ಒಬ್ಬರು ಹುಲಿಯೊಂದು ಕಾಡುಹಂದಿಯನ್ನು ಬೇಟೆಯಾಡುವ ರೋಚಕ ದೃಶ್ಯವನ್ನು ತಮ್ಮ ಮೊಬೈಲ್ ಫೋನಲ್ಲಿ ಸೆರೆಹಿಡಿದಿದ್ದಾರೆ.

ಮೈಸೂರು:  ಹಿಂಸ್ರಪಶುಗಳಾದ ಹುಲಿ, ಸಿಂಹ ಮತ್ತು ಚಿರತೆಗಳು ತಮ್ಮ ಆಹಾರವನ್ನು ಬೇಟೆಯಾಡುವ ದೃಶ್ಯ ರೋಚಕ ಮತ್ತು ಅಷ್ಟೇ ಭಯಾನಕ. ಮೈಸೂರಿನ ಹೆಚ್ ಡಿ ಕೋಟೆ (HD Kote) ದಮ್ಮನಕಟ್ಟೆಯಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರ ವಾಹನ ಕಾಡಿನ ಮೂಲಕ ಹಾದುಹೋಗುವಾಗ ಅವರ ಎದುರುಗಡೆಯೇ ಹುಲಿಯೊಂದು (tiger) ಕಾಡುಹಂದಿಯನ್ನು (wild bore) ಬೇಟೆಯಾಡಿದೆ. ಪ್ರವಾಸಿಗರಲ್ಲಿ ಒಬ್ಬರು ಈ ರೋಚಕ ದೃಶ್ಯವನ್ನು ತಮ್ಮ ಮೊಬೈಲ್ ಫೋನಲ್ಲಿ ಸೆರೆಹಿಡಿದಿದ್ದಾರೆ.