ಗುಜರಾತ್: ಮೊರ್ಬಿ ನದಿ ತೂಗುಸೇತುವೆ ಮೇಲೆ ಕೆಲ ಯುವಕರು ನಡೆಸಿದ ಹುಚ್ಚಾಟ ಉಳಿದವರ ಪಾಲಿಗೆ ಮುಳುವಾಯಿತೇ?
ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕೆಲವು ಪುಂಡ ಹುಡುಗರು ಸೇತುವೆ ಮೇಲೆ ಹುಚ್ಚಾಟ ನಡೆಸಿದ್ದರಿಂದಲೇ ದುರಂತ ಸಂಭವಿಸಿದೆ.
ಗುಜರಾತ್: ಇದು ಭಯಾನಕ ದೃಶ್ಯ. ಗುಜರಾತ್ ಮೊರ್ಬಿ ನದಿಗೆ (Morbi River) ಅಡ್ಡಲಾಗಿ ನಿರ್ಮಿಸಲಾಗಿದ್ದ ತೂಗು ಸೇತುವೆಯೊಂದು (hanging bridge) ಕುಸಿದು ಸುಮಾರು 150 ಜನರನ್ನು ಬಲಿ ತೆಗೆದುಕೊಂಡಿರುವ ದಾರುಣ ಸಂಗತಿ ನಿಮಗೆ ಗೊತ್ತಿದೆ. ಸದರಿ ಸೇತುವೆ ಕುಸಿದು ಹಲವಾರು ಜನ ನದಿಪಾಲಾಗುವ ದೃಶ್ಯ ನಮಗೆ ಲಭ್ಯವಾಗಿದೆ. ನಮಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಕೆಲವು ಪುಂಡ ಹುಡುಗರು (youths) ಸೇತುವೆ ಮೇಲೆ ಹುಚ್ಚಾಟ ನಡೆಸಿದ್ದರಿಂದಲೇ ದುರಂತ ಸಂಭವಿಸಿದೆ. ಕೇವಲ ಒಂದು ವಾರದ ಹಿಂದಷ್ಟೇ ಸೇತುವೆಯನ್ನು ದುರಸ್ತಿಗೊಳಿಸಿ ಲೋಕಾರ್ಪಣೆ ಮಾಡಲಾಗಿತ್ತಂತೆ!

