ಗೆಳೆಯರೊಂದಿಗೆ ಇಸ್ಪೀಟ್ ಆಡುವಾಗಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಮೈಸೂರು ಜೆಡಿ(ಎಸ್) ಮುಖಂಡ ಅಶ್ವಥ್ ಚಿಯಾ

ಗೆಳೆಯರೊಂದಿಗೆ ಇಸ್ಪೀಟ್ ಆಡುವಾಗಲೇ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಮೈಸೂರು ಜೆಡಿ(ಎಸ್) ಮುಖಂಡ ಅಶ್ವಥ್ ಚಿಯಾ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Oct 31, 2022 | 1:09 PM

ಕೆಲ ದಿನಗಳಿಂದ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಅಶ್ವಥ್​ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.

ಮೈಸೂರು: ಇತ್ತೀಚಿನ ದಿನಗಳಲ್ಲಿ ಹೃದಯಾಘಾತಕದ ಮೂಲಕ ಸಾವು ಜನಸಾಮಾನ್ಯರು ಊಹಿಸಲು ಆಗದಷ್ಟು ಅನಿರೀಕ್ಷಿತವಾಗಿ ಬಿಟ್ಟಿದೆ ಅನ್ನೋದಿಕ್ಕೆ ಈ ವಿಡಿಯೋ ಸಾಕ್ಷಿ. ಮೈಸೂರಿನ ಜೆಡಿ(ಎಸ್) ಮುಖಂಡ ಅಶ್ವಥ್ ಚಿಯಾ (Ashwath Chiya) ಅವರು ಮೈಸೂರು-ಬೆಂಗಳೂರು ರಸ್ತೆಯಲ್ಲಿರುವ ರಿಕ್ರಿಯೇಶನ್ ಕ್ಲಬ್ ವೊಂದರಲ್ಲಿ (recreation club) ಗೆಳೆಯರೊಂದಿಗೆ ಇಸ್ಪೀಟ್ ಆಡುವಾಗ ಹೃದಯಾಘಾತಕ್ಕೊಳಗಾಗುವುದು (heart attack) ಕ್ಲಬ್ಬಿನ ಸಿಸಿಟಿವಿ ಕೆಮೆರಾದಲ್ಲಿ ಸೆರೆಯಾಗಿದೆ. ಕೆಲ ದಿನಗಳಿಂದ ರಾಜಕೀಯದಿಂದ ಅಂತರ ಕಾಯ್ದುಕೊಂಡಿದ್ದ ಅಶ್ವಥ್​ರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅವರು ಬದುಕುಳಿಯಲಿಲ್ಲ.