ನಾಗರ ಪಂಚಮಿ ನಿಮಿತ್ತ ಬಂಡಿಗೆ ಎತ್ತು ಹೂಡದ ಸಹೋದರರು 10 ಯೂರಿಯಾ ಚೀಲ ಹೇರಿ ತಾವೇ ಎಳೆತಂದರು
ಊರಲ್ಲಿರೋದು ಮೆಟಲ್ ರಸ್ತೆಯಾದರೂ ಇವತ್ತು ಮಳೆ ಸುರಿಯದ ಕಾರಣ ಬಸವರಾಜ ಮತ್ತು ಪ್ರಕಾಶ್ಗೆ ಬಂಡಿ ಎಳೆದುಕೊಂಡು ಬರೋದು ಕಷ್ಟವೇನೂ ಅಗಿಲ್ಲ. ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಂದು ಆಧಾರ್ ಕಾರ್ಡ್ಗೆ ಎರಡು ಚೀಲ ಯೂರಿಯಾ ಕೊಡುತ್ತಿದ್ದರಂತೆ, ಇವರ ಕುಟುಂಬದಲ್ಲಿ 5 ಆಧಾರ್ ಕಾರ್ಡುಗಳು ಇರುವ ಕಾರಣ 10 ಚೀಲ ಸಿಕ್ಕಿದೆ.
ಕೊಪ್ಪಳ, ಜುಲೈ 29: ಕೊಪ್ಪಳ ತಾಲೂಕಿನ ಮುದ್ದಾಬಳ್ಳಿ ಗ್ರಾಮದ ಬಗ್ಗೆ ಬಹಳಷ್ಟು ಜನಕ್ಕೆ ಗೊತ್ತಿರಲಾರದು, ಆದರೆ ಬಸವರಾಜ ಮತ್ತು ಪ್ರಕಾಶ್ (Basavaraj and Prakash) ಹೆಸರಿನ ಸಹೋದರರು ಊರಿನ ಹೆಸರು ಬಹಳಷ್ಟು ಜನಕ್ಕೆ ಗೊತ್ತಾಗುವಂತೆ ಮಾಡಿದ್ದಾರೆ. ರಾಜ್ಯದ ಎಲ್ಲ ಭಾಗಗಳಲ್ಲಿ ಯೂರಿಯಾ ಅಭಾವ ತಲೆದೋರಿದೆ ಮತ್ತು ಅದು ಕಾಳಸಂತೆಯಲ್ಲಿ ಮಾರಾಟವಾಗುತ್ತಿರುವ ವದಂತಿಗಳು ಹರಿದಾಡುತ್ತಿವೆ. ಮುದ್ದಾಬಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದೆ ರೈತರು ರಾತ್ರಿಯಿಡೀ ಕಾಯ್ದು ಇವತ್ತು ಯೂರಿಯಾ ಪಡೆದರು. ಪ್ರಕಾಶ್ ಮತ್ತು ಬಸವರಾಜ ಕುಟುಂಬಕ್ಕೆ 10 ಚೀಲ ಯೂರಿಯೂ ಸಿಕ್ಕಿದೆ. ಅದರೆ ಇವತ್ತು ನಾಗರ ಪಂಚಮಿ ಹಬ್ಬವಾಗಿರುವುದರಿಂದ ಎತ್ತುಗಳನ್ನು ದುಡಿಸುವುದಿಲ್ಲ. ಹಾಗಾಗೇ ಸಹೋದರರು ಯೂರಿಯಾದ ಹತ್ತು ಚೀಲಗಳನ್ನು ಬಂಡಿಯಲ್ಲಿ ಹೇರಿ ತಾವೇ ಅದನ್ನು ಎತುಗಳಂತೆ ಎಳೆದು ಮನೆಗೆ ಬಂದಿದ್ದಾರೆ.
ಇದನ್ನೂ ಓದಿ: ಕುಮಾರಸ್ವಾಮಿ ಚಳುವಳಿ ಮಾಡುವ ಬದಲು ಕೇಂದ್ರದಿಂದ ರಾಜ್ಯಕ್ಕೆ ಯೂರಿಯಾ ಬಿಡುಗಡೆ ಮಾಡಿಸಲಿ: ಸಿದ್ದರಾಮಯ್ಯ
ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ
