ಪ್ರಚಾರಕ್ಕೆ ತೆರಳಿದ್ದ ಬಿಎಸ್ ಯಡಿಯೂರಪ್ಪ ಕಾರು ಪಂಚರ್; ಬೇರೆ ಕಾರ್ನಲ್ಲಿ ತೆರಳಿದ ರಾಜಹುಲಿ
ಬಿ.ಎಸ್.ಯಡಿಯೂರಪ್ಪ (BS Yediyurappa) ಕಾರು ಪಂಕ್ಚರ್ ಆಗಿದ್ದು, ಕಾರಿನಿಂದ ಇಳಿದು ಮತ್ತೊಂದು ಕಾರಿನಲ್ಲಿ ತೆರಳಿದ ಘಟನೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ(Kudligi) ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ನಡೆದಿದೆ. ಬಿಜೆಪಿ ಸಮಾವೇಶ ಮುಗಿಸಿ ಹೊರಟಿದ್ದ ವೇಳೆ ಕಾರು ಪಂಕ್ಚರ್ ಆಗಿದ್ದು ಗೊತ್ತಾಗಿದೆ.
ವಿಜಯನಗರ, ಏ.16: ರಾಜ್ಯದೆಲ್ಲೆಡೆ ಲೋಕಸಭಾ ಚುನಾವಣಾ ಕಾವು ರಂಗೇರಿದ್ದು, ಅದರಂತೆ ಉಭಯ ಪಕ್ಷಗಳು ಅಬ್ಬರದ ಪ್ರಚಾರ ಕೈಗೊಂಡಿವೆ. ಅದರಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ (BS Yediyurappa) ಕೂಡ ಭರ್ಜರಿ ಪ್ರಚಾರದಲ್ಲಿ ತೊಡಗಿದ್ದಾರೆ. ಇದೇ ವೇಳೆ ವಿಜಯನಗರ ಜಿಲ್ಲೆಯ ಕೂಡ್ಲಿಗಿ(Kudligi) ತಾಲೂಕಿನ ಖಾನಾಹೊಸಹಳ್ಳಿಯಲ್ಲಿ ಬಿ.ಎಸ್.ಯಡಿಯೂರಪ್ಪ ಕಾರು ಪಂಕ್ಚರ್ ಆಗಿದ್ದು, ಕಾರಿನಿಂದ ಇಳಿದು ಮತ್ತೊಂದು ಕಾರಿನಲ್ಲಿ ತೆರಳಿದ್ದಾರೆ. ಬಿಜೆಪಿ ಸಮಾವೇಶವನ್ನು ಮುಗಿಸಿ ಹೊರಟಿದ್ದರು, ಈ ವೇಳೆ ಕಾರು ಹತ್ತುತ್ತಿದ್ದಂದೆ ಪಂಕ್ಚರ್ ಆಗಿರುವುದು ಗೊತ್ತಾಗಿದ್ದು, ಹತ್ತಿದ ಕಾರು ಇಳಿದು, ಬೇರೆ ಕಾರಿನ ಮೂಲಕ ಹೂವಿನ ಹಡಗಲಿ ಕಡೆ ಹೊರಟಿದ್ದಾರೆ.
ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published on: Apr 16, 2024 06:14 PM
Latest Videos