Sandur: ವೇದಿಕೆಯ ಮೇಲೆ ಅಮಿತ್ ಶಾ ತೋರಿದ ಅವಸರದ ಪ್ರವೃತ್ತಿ ಮತ್ತು ಬಿಎಸ್ ಯಡಿಯೂರಪ್ಪ ಸನ್ಮಾನ ನಿರಾಕರಿಸಿದ್ದು ಜನಕ್ಕೆ ಅರ್ಥವಾಗಲಿಲ್ಲ!
ಕಾರ್ಯಕ್ರಮದ ನಿರೂಪಕರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು ಸತ್ಕರಿಸುವ ಬಗ್ಗೆ ಘೋಷಣೆ ಮಾಡಿದಾಗ ಹಿರಿಯ ಮುತ್ಸದ್ದಿ ಹಾರ ಕೂಡ ಹಾಕಿಸಿಕೊಳ್ಳದೆ ಹಿಂದಕ್ಕೆ ಸರಿದುಬಿಡುತ್ತಾರೆ.
ಬಳ್ಳಾರಿ: ಜಿಲ್ಲೆಯ ಸಂಡೂರಿಗೆ ಅಗಮಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ವಿಜಯಸಂಕಲ್ಪ ಯಾತ್ರೆ ಉದ್ಘಾಟನೆ ಮಾಡಲು ವೇದಿಕೆ ಹತ್ತಿದಾಗ ಅದ್ಯಾಕೆ ಅಷ್ಟು ಅವರಸದ ಪ್ರವೃತ್ತಿ ತೋರಿದರು ಅನ್ನೋದು ನೆರೆದಿದ್ದ ಜನಕ್ಕೆ ಅರ್ಥವಾಗಲಿಲ್ಲ. ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರು ಶಾ ಅವರನ್ನು ಸತ್ಕರಿಸುವಾಗಲೂ ಧಾವಂತ ಪ್ರದರ್ಶಿಸುತ್ತಾರೆ. ಅದೇ ಸಮಯದಲ್ಲಿ ಮತ್ತೊಂದು ಘಟನೆ ನಡೆಯುತ್ತದೆ. ಕಾರ್ಯಕ್ರಮದ ನಿರೂಪಕರು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರನ್ನು (BS Yediyurappa) ಸತ್ಕರಿಸುವ ಬಗ್ಗೆ ಘೋಷಣೆ ಮಾಡಿದಾಗ ಹಿರಿಯ ಮುತ್ಸದ್ದಿ ಹಾರ ಕೂಡ ಹಾಕಿಸಿಕೊಳ್ಳದೆ ಹಿಂದಕ್ಕೆ ಸರಿದುಬಿಡುತ್ತಾರೆ. ಅವರು ಯಾಕೆ ಹಾಗೆ ಮಾಡಿದರು ಅಂತಲೂ ಜನರಿಗೆ ಅರ್ಥವಾಗಲಿಲ್ಲ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Latest Videos