ಸಿಟಿ ರವಿಯನ್ನು ಸಮರ್ಥಿಸಿಕೊಳ್ಳುತ್ತೇನೆ, ಆದರೆ ಗುಡಿಯೊಳಗೆ ಹೋದ ವಿಡಿಯೋ ವೈರಲ್ ಮಾಡಿದರೆ ಬೇರೆ ಹೇಳಿಕೆ ನೀಡುತ್ತೇನೆ! ಬಸನಗೌಡ ಯತ್ನಾಳ್
ಒಂದು ಪಕ್ಷ ಅವರು ಗುಡಿಯೊಳಗೆ ಹೋದ ದೃಶ್ಯವನ್ನು ಮಾಧ್ಯಮದವರು ವೈರಲ್ ಮಾಡಿದರೆ ಅಗ ಬೇರೆ ಹೇಳಿಕೆ ನೀಡುವುದಾಗಿ ವಿಜಯಪುರ ಶಾಸಕ ಹೇಳಿದರು.
ಬೆಂಗಳೂರು: ಬೇರೆ ಸಮಯದಲ್ಲಾಗಿದ್ದರೆ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ್ (Basangouda Patil Yatnal) ಭಟ್ಕಳದಲ್ಲಿ ಮಾಂಸಹಾರ ಸೇವಿಸಿ ಹಿಂದೂ ದೇವಾಲಯ ಪ್ರವೇಶಿಸಿದ ಸಿಟಿ ರವಿಯವರನ್ನು (CT Ravi) ಸಮರ್ಥಿಸಿಕೊಳ್ಳುತ್ತಿರಲಿಲ್ಲ. ಆದರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರ ಎಚ್ಚರಿಕೆ ನಂತರ ಯತ್ನಾಳ್ ಬಾಯಿಗೆ ಲಗಾಮು ಹಾಕಿದ್ದಾರೆ. ಸಿಟಿ ರವಿ ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ನಿಜವಾದರೂ ಹೊರಗಿನಿಂದಲೇ ದೇವರಿಗೆ ನಮಸ್ಕಾರ ಮಾಡಿದ್ದಾರೆ, ಗರ್ಭಗುಡಿಯೊಳಗೆ ಪ್ರವೇಶ ಮಾಡಿಲ್ಲ ಎಂದು ಯತ್ನಾಳ್ ಹೇಳಿದರು. ಒಂದು ಪಕ್ಷ ಅವರು ಗುಡಿಯೊಳಗೆ ಹೋದ ದೃಶ್ಯವನ್ನು ಮಾಧ್ಯಮದವರು ವೈರಲ್ ಮಾಡಿದರೆ ಅಗ ಬೇರೆ ಹೇಳಿಕೆ ನೀಡುವುದಾಗಿ ವಿಜಯಪುರ ಶಾಸಕ ಹೇಳಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
ಗೌತಮ್ ಅದಾನಿ ಡಿಕೆಶಿ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
