Mandya: ಮೂವತ್ತಾದರೂ ಬ್ರಹ್ಮಚಾರಿಗಳಾಗುಳಿದಿರುವ ಕೆಎಂ ದೊಡ್ಡಿ ಯುವಕರು ಮಹದೇಶ್ವರ ಮಾದಪ್ಪನಿಗೆ ಹರಕೆ ಸಲ್ಲಿಸಲು ಪಾದಯಾತ್ರೆ ಹೊರಟರು!

Arun Kumar Belly

|

Updated on: Feb 23, 2023 | 1:58 PM

ಹಾಗಾಗೇ, ಗ್ರಾಮದ ಹಲವಾರು 30 ಪ್ಲಸ್ ಯುವಕರು ಪಾದಯಾತ್ರೆ ಹೊರಟಿದ್ದಾರೆ. ಅಂದಹಾಗೆ ಅವರ ಪಾದಯಾತ್ರೆಯನ್ನು ಚಿತ್ರನಟ ಡಾಲಿ ಧನಂಜಯ ಚಾಲನೆ ನೀಡಿದ್ದಾರೆ.

ಮಂಡ್ಯ: ಜಿಲ್ಲೆಯ ಕೆಎಂ ದೊಡ್ಡಿ ಗ್ರಾಮದ ಯುವಕರಿಗೆ ಒಂದು ದೊಡ್ಡ ಸಮಸ್ಯೆ ಕಾಡುತ್ತಿದೆ. ವಯಸ್ಸು ಮೀರುತ್ತಿದ್ದರೂ ಅವರಿಗೆ ಮದುವೆಯಾಗಲು ಹೆಣ್ಣು ಸಿಗುತ್ತಿಲ್ಲವಂತೆ. ಈ ಸಮಸ್ಯೆ ಈಗ ಎಲ್ಲ ಕಡೆ ಆರಂಭವಾಗಿದೆ ಅಂತ ಪ್ರಾಯಶಃ ಅವರಿಗೆ ಗೊತ್ತಿರಲಿಕ್ಕಿಲ್ಲ. ವಿದ್ಯಾವಂತ ಯುವಕರಿಗೆ ನೌಕರಿಗಳು ಮರೀಚಿಕೆಯಾಗಿರುವುದರಿಂದ ಹೆಣ್ಣು ಹೆತ್ತವರು ಅದ್ಹೇಗೆ ಮಗಳನ್ನು ನೌಕರಿಯಿಲ್ಲದ ತರುಣನಿಗೆ ಕೊಟ್ಟಾರು? ಆದರೆ, ಕೆಎಮ್ ದೊಡ್ಡಿ (KM Doddi) ಗ್ರಾಮದ ಯುವಕರಿಗೆ ಯಾರೋ ಒಂದು ಉಪಾಯ ಸೂಚಿಸಿದ್ದಾರೆ. ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿ ಮಾದಪ್ಪನಿಗೆ (Madappa) ಪ್ರಾರ್ಥನೆ ಸಲ್ಲಿಸಿದರೆ ಅವರ ಸಮಸ್ಯೆ ನೀಗುತ್ತದಂತೆ. ಹಾಗಾಗೇ, ಗ್ರಾಮದ ಹಲವಾರು 30 ಪ್ಲಸ್ ಯುವಕರು ಪಾದಯಾತ್ರೆ ಹೊರಟಿದ್ದಾರೆ. ಅಂದಹಾಗೆ ಅವರ ಪಾದಯಾತ್ರೆಯನ್ನು ಚಿತ್ರನಟ ಡಾಲಿ ಧನಂಜಯ (Dolly Dhananjay) ಚಾಲನೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow us on

Click on your DTH Provider to Add TV9 Kannada