ವಿಜಯಪುರ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತೋ ಬಿಡುತ್ತೋ, ಸಿದ್ದರಾಮಯ್ಯ (Siddaramaiah) ಪುನಃ ಮುಖ್ಯಮಂತ್ರಿಯಾಗ್ತಾರೋ ಇಲ್ಲವೋ ನಮಗೆ ಗೊತ್ತಿಲ್ಲ ಮಾರಾಯ್ರೇ. ಆದರೆ ನಮಗೆ ಗೊತ್ತಿರುವ ಸಂಗತಿಯೆಂದರೆ, ಸಿದ್ದರಾಮಯ್ಯನವರ ಜನಪ್ರಿಯತೆ (popularity). ಅವರ ನೇತೃತ್ವದ ಪ್ರಜಾಧ್ವನಿ ಯಾತ್ರೆ (Prajadhvani Yatre) ವಿಜಯಪುರಕ್ಕೆ ಆಗಮಿಸಿದ್ದು ಗುರುವಾರ ಬೆಳಗ್ಗೆ ಬಿಎಲ್ ಡಿಈ ಸಂಸ್ಥೆಯ ಅತಿಥಿ ಗೃಹದಲ್ಲಿ ಪ್ರಾಯಶಃ ಇನ್ನೂ ನಿದ್ರಿಸುತ್ತಿದ್ದ ಸಿದ್ದರಾಮಯ್ಯನವರನ್ನು ನೋಡಲು ಜನ ಆಗಮಿಸಿದರು. ವಿಡಿಯೋದಲ್ಲಿ ನೋಡಿ, ಸಿದ್ದರಾಮಯ್ಯ ಟಿ ಶರ್ಟ್ ಧರಿಸಿ ಕೆದರಿದ ಕ್ರಾಪಿನೊಂದಿಗೆ ಜನರ ನಡುವೆ ಕಾಣಿಸಿಕೊಳ್ಳುತ್ತಾರೆ. ತಮ್ಮ ವಿಶ್ರಾಂತಿಗೆ ಭಂಗವುಂಟಾದರೂ ಸಿದ್ದರಾಮಯ್ಯ ಬೇಸರಿಸಿಕೊಳ್ಳದೆ ಮುಗಳ್ನಗುತ್ತಾ ಜನರೊಂದಿಗೆ ಬೆರೆಯುತ್ತಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ