ಪುತ್ರನ ವಿರುದ್ಧ ಮಸಲತ್ತು ನಡೆಯುತ್ತಿದ್ದಂತೆಯೇ ದೆಹಲಿಗೆ ಹಾರಿದ ಯಡಿಯೂರಪ್ಪ

Updated on: Dec 04, 2025 | 2:49 PM

ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯಲ್ಲೂ ಬಣ ರಾಜಕಾರಣ ಗರಿಗೆದರಿದೆ. ಕಮಲ ಪಡೆಯ ಒಂದು ತಂಡ ದೆಹಲಿಯಲ್ಲಿ ಮೊಕ್ಕಾಂ ಹೂಡಿ, ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದೆ. ಈ ನಡುವೆ ಬಿ.ಎಸ್. ಯಡಿಯೂರಪ್ಪ ಕೂಡ ದೆಹಲಿಗೆ ಹಾರಿರೋದು ಕುತೂಹಲ ಮೂಡಿಸಿದೆ. ಹೌದು.. ಭಿನ್ನಮತದ ಬೇಗುದಿ ಬಿಜೆಪಿ ಮನೆಯಲ್ಲಿ ಬೇಯುತ್ತಿದೆ. ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ದೆಹಲಿ ಕದ ತಟ್ಟಿತ್ತೋ, ಹಾಗೆಯೇ ಬಿಜೆಪಿಯ ಬದಲಾವಣೆಯ ಬಿರುಗಾಳಿಯೂ ಬಿಜೆಪಿ ವರಿಷ್ಠರ ಅಂಗಳಕ್ಕೆ ಬಿದ್ದಿದೆ. ತಂಡೋಪತಂಡವಾಗಿ ದೆಹಲಿಗೆ ತೆರಳಿದ್ದ ರೆಬೆಲ್ಸ್ ನಾಯಕರನ್ನ ಭೇಟಿ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಇಷ್ಟು ಮಾತ್ರವಲ್ಲ ತಮಗೆ ಯಾರ ವಿರುದ್ಧ ಅಸಮಾಧಾನ ಇದ್ಯೋ ಅಂತವರ ವಿರುದ್ಧ ಸರಣಿ ದೂರು ಕೊಟ್ಟು, ತಕ್ಕ ಶಾಸ್ತಿ ಮಾಡುವಂತೆ ಮನವಿ ಮಾಡಿದೆ.

ಬೆಂಗಳೂರು, (ಡಿಸೆಂಬರ್ 04): ಕಾಂಗ್ರೆಸ್ ಮಾತ್ರವಲ್ಲ ಬಿಜೆಪಿಯಲ್ಲೂ ಬಣ ರಾಜಕಾರಣ ಗರಿಗೆದರಿದೆ. ಕಮಲ ಪಡೆಯ ಒಂದು ತಂಡ ದೆಹಲಿಯಲ್ಲಿ ಮೊಕ್ಕಾಂ ಹೂಡಿ, ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿದೆ. ಈ ನಡುವೆ ಬಿ.ಎಸ್. ಯಡಿಯೂರಪ್ಪ ಕೂಡ ದೆಹಲಿಗೆ ಹಾರಿರೋದು ಕುತೂಹಲ ಮೂಡಿಸಿದೆ. ಹೌದು.. ಭಿನ್ನಮತದ ಬೇಗುದಿ ಬಿಜೆಪಿ ಮನೆಯಲ್ಲಿ ಬೇಯುತ್ತಿದೆ. ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಚರ್ಚೆ ದೆಹಲಿ ಕದ ತಟ್ಟಿತ್ತೋ, ಹಾಗೆಯೇ ಬಿಜೆಪಿಯ ಬದಲಾವಣೆಯ ಬಿರುಗಾಳಿಯೂ ಬಿಜೆಪಿ ವರಿಷ್ಠರ ಅಂಗಳಕ್ಕೆ ಬಿದ್ದಿದೆ. ತಂಡೋಪತಂಡವಾಗಿ ದೆಹಲಿಗೆ ತೆರಳಿದ್ದ ರೆಬೆಲ್ಸ್ ನಾಯಕರನ್ನ ಭೇಟಿ ಮಾಡುವಲ್ಲಿ ಸಕ್ಸಸ್ ಆಗಿದ್ದಾರೆ. ಇಷ್ಟು ಮಾತ್ರವಲ್ಲ ತಮಗೆ ಯಾರ ವಿರುದ್ಧ ಅಸಮಾಧಾನ ಇದ್ಯೋ ಅಂತವರ ವಿರುದ್ಧ ಸರಣಿ ದೂರು ಕೊಟ್ಟು, ತಕ್ಕ ಶಾಸ್ತಿ ಮಾಡುವಂತೆ ಮನವಿ ಮಾಡಿದೆ.

ಈ ನಡುವೆ ಅಚ್ಚರಿ ಬೆಳವಣಿಗೆ ಎಂಬಂತೆ ಮಾಜಿ ಸಿಎಂ ಯಡಿಯೂರಪ್ಪ ದೆಹಲಿಗೆ ಹಾರಿದ್ದು, ರಾಜ್ಯಾಧ್ಯಕ್ಷರಾಗಿ ತಮ್ಮ ಪುತ್ರರನ್ನೇ ಮುಂದುವರೆಸ್ಬೇಕು ಎಂಬ ಮನವಿ ಮಾಡಲು ಬಂದ್ರಾ ಗೊತ್ತಿಲ್ಲ. ಒಟ್ನಲ್ಲಿ ರೆಬೆಲ್ಸ್ ದೂರಿನ ಬೆನ್ನಲ್ಲೇ ರಾಜಹುಲಿ ರಾಷ್ಟ್ರ ರಾಜಧಾನಿಗೆ ತೆರಳಿರೋದು ಕುತೂಹಲ ಮೂಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published on: Dec 04, 2025 02:39 PM