ಕುಮಾರಸ್ವಾಮಿ ಮೂಗಿನಿಂದ ರಕ್ತ ನೋಡಿ ಶಾಕ್ ಆಗಿ ನಿಂತ ಬಿಎಸ್​ ಯಡಿಯೂರಪ್ಪ

|

Updated on: Jul 28, 2024 | 7:24 PM

ಇಂದು(ಭಾನುವಾರ) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಾಜ್ಯ ಸರ್ಕಾರದ ಅಕ್ರಮಗಳ ವಿರುದ್ಧದ ಹೋರಾಟದ ಬಗ್ಗೆ ಜೆಡಿಎಸ್​, ಬಿಜೆಪಿ ನಾಯಕರ ಸಭೆ ಹಮ್ಮಿಕೊಂಡಿತ್ತು. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಹೆಚ್.ಡಿ.ಕುಮಾರಸ್ವಾಮಿ(H. D. Kumaraswamy) ಅವರು ಮಾತನಾಡುವಾಗ ರಕ್ತ ಸೋರಿಕೆ ಆಗಿದೆ. ಈ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಶಾಕ್​ ಆಗಿದ್ದು, ದಿಕ್ಕೆ ತೋಚದಂತಾಗಿದೆ.

ಬೆಂಗಳೂರು, ಜು.28: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ(H. D. Kumaraswamy) ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಿದ್ದ ವೇಳೆ ಏಕಾಎಕಿ ಅವರ ಮೂಗಿನಿಂದ ರಕ್ತಸ್ರಾವವಾಗಿದೆ. ಇಂದು(ಭಾನುವಾರ) ಬೆಂಗಳೂರಿನ ಖಾಸಗಿ ಹೋಟೆಲ್​ನಲ್ಲಿ ರಾಜ್ಯ ಸರ್ಕಾರದ ಅಕ್ರಮಗಳ ವಿರುದ್ಧದ ಹೋರಾಟದ ಬಗ್ಗೆ ಜೆಡಿಎಸ್​, ಬಿಜೆಪಿ ನಾಯಕರ ಸಭೆ ಹಮ್ಮಿಕೊಂಡಿತ್ತು. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ರಕ್ತ ಸೋರಿಕೆ ಆಗಿದೆ. ಈ ವೇಳೆ ಪಕ್ಕದಲ್ಲಿಯೇ ನಿಂತಿದ್ದ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಶಾಕ್​ ಆಗಿದ್ದು, ದಿಕ್ಕೆ ತೋಚದಂತೆ ನಿಂತಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಪುತ್ರ ನಿಖಿಲ್ ಕುಮಾರಸ್ವಾಮಿ, ಅಪ್ಪನನ್ನು ಬೆಂಗಳೂರಿನ ಜಯನಗರದ ಅಪೋಲೊ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ