Karnataka Assembly Polls: ಪ್ರಚಾರ ಕಾರ್ಯದಲ್ಲಿ ಬ್ಯೂಸಿಯಾಗಿರುವಾಗಲೇ ಚುನಾವಣಾ ಸುದ್ದಿಗಳನ್ನು ಟಿವಿ9 ಕನ್ನಡವಾಹಿನಿಯಲ್ಲಿ ವೀಕ್ಷಿಸಿದ ಯಡಿಯೂರಪ್ಪ
ಸೋಮವಾರ ಬೆಳಗ್ಗೆ ಯಡಿಯೂರಪ್ಪ ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ವೀರಶೈವ ಲಿಂಗಾಯತ ಮುಖಂಡರ ಜೊತೆ ಮಾತುಕತೆ ನಡೆಸಿದರು.
ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಚುನಾವಣಾ ಪ್ರಚಾರ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ. ಏತನ್ಯಧ್ಯೆ, ಸೋಮವಾರ ಬೆಳಗ್ಗೆ ಅವರು ಶಿವಮೊಗ್ಗ ಬಿಜೆಪಿ ಕಚೇರಿಯಲ್ಲಿ ವೀರಶೈವ ಲಿಂಗಾಯತ ಮುಖಂಡರ ಜೊತೆ ಮಾತುಕತೆ ನಡೆಸಿದರು. ಅದೇ ವೇಳೆ ಸಿದ್ದರಾಮಯ್ಯ ಲಿಂಗಾಯತ ಸಮುದಾಯದ ಬಗ್ಗೆ ನೀಡಿದ ಹೇಳಿಕೆಗೆ ಪ್ರತಿಯಾಗಿ ತಾವು ತರಾಟೆಗೆ ತೆಗೆದುಕೊಂಡ ಸಂಗತಿ ಟಿವಿ9 ಕನ್ನಡ ವಾಹಿನಿಯಲ್ಲಿ ಬಿತ್ತರಗೊಳ್ಳುತ್ತಿರುವುದನ್ನು ವೀಕ್ಷಿಸಿದರು. ಕಚೇರಿಯಲ್ಲಿ ಯಡಿಯೂರಪ್ಪರೊಂದಿಗೆ ಪಕ್ಷದ ಶಿವಮೊಗ್ಗ ಅಭ್ಯರ್ಥಿ ಚನ್ನಬಸಪ್ಪ ಮತ್ತು ಶಿವಮೊಗ್ಗ ಸಂಸದ ಬಿವೈ ರಾಘವೇಂದ್ರ ಇದ್ದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Apr 24, 2023 11:54 AM
Latest Videos