ಹಾವೇರಿ: ಕರ್ಜಗಿಯ ಕಾರಹುಣ್ಣಿಮೆಯ ಬಂಡಿ ಉತ್ಸವದಲ್ಲಿ ಅವಘಡ, ವ್ಯಕ್ತಿಯ ಮೇಲೆ ಹತ್ತಿದ ಬಂಡಿ
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದ ಕರ್ಜಗಿಯ ಕಾರಹುಣ್ಣಿಮೆಯ ಬಂಡಿ ಉತ್ಸವದಲ್ಲಿದ ವೇಳೆ ಎತ್ತಿನ ಬಂಡಿ ವ್ಯಕ್ತಿಯೊಬ್ಬರ ಕಾಲ ಮೇಲೆ ಹರಿದ ಘಟನೆ ನಡೆದಿದೆ.
ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿ ನಡೆದ ಕರ್ಜಗಿಯ ಕಾರಹುಣ್ಣಿಮೆಯ ಬಂಡಿ ಉತ್ಸವದಲ್ಲಿ (Kar Hunnime cart Festival) ಅವಘಡ ಸಂಭವಿಸಿದೆ. ಜನಸ್ತೋಮದ ನಡುವೆ ಬಂಡಿ ಸಹಿತ ಓಡುತ್ತಿದ್ದ ಎತ್ತುಗಳು ಜನರಿಗೆ ತಾಗಿಕೊಂಡು ಓಡಿದೆ. ಈ ವೇಳೆ ಬಂಡಿ ವ್ಯಕ್ತಿಯೊಬ್ಬರ ಕಾಲಿನ ಮೇಲೆ ಹರಿದು ಹೋಗಿದೆ. ಬ್ರಹ್ಮ ಲಿಂಗೇಶ್ವರ ದೇವಸ್ಥಾನ ಬಳಿ ನಡೆದ ಘಟನೆ ಇದಾಗಿದ್ದು, ಗಾಯಾಳುವನ್ನು ಹಾವೇರಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ: ಹಾವೇರಿ: ಪ್ರೇಯಸಿ ಸಹೋದರರಿಂದ ಟಾರ್ಚರ್, ಅಣ್ಣನ ಲವ್ ಸ್ಟೋರಿಗೆ ಬಲಿಯಾದ ತಮ್ಮ
ಮತ್ತಷ್ಟ ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ