ಡಿಜೆ ಹಳ್ಳಿ ಪೊಲೀಸರು ಮತ್ತೇ ನಿದ್ರೆಗೆ ಜಾರಿದಂತಿದೆ, ಕಳ್ಳಕಾಕರು ನಿರ್ಭಿತಿಯಿಂದ ತಮ್ಮ ಕಾಯಕದಲ್ಲಿ ತೊಡಗಿದ್ದಾರೆ

| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jul 19, 2022 | 11:23 AM

ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಗೋಕುಲ ಪ್ರದೇಶದಲ್ಲಿ ಪುಡಿರೌಡಿಗಳು ಮತ್ತು ಕಳ್ಳಕಾಕರಿಗೆ ಪೊಲೀಸರ ಭಯವಿದ್ದಂತಿಲ್ಲ.

ಬೆಂಗಳೂರು: ಇದು ಗೃಹ ಸಚಿವ ಆರಗ ಜ್ಞಾನೇಂದ್ರ (Araga Jnanendra), ಬೆಂಗಳೂರು ಪೊಲೀಸ್ ಕಮೀಶನರ್ ಮತ್ತು ಡಿಜೆ ಹಳ್ಳಿ (DJ Halli) ಏರಿಯಾದ ಸಂಬಂಧಪಟ್ಟ ಎಸಿಪಿ ಮತ್ತು ಪೊಲೀಸರ ಗಮನಕ್ಕೆ. ಡಿಜೆ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ನಂದಗೋಕುಲ (Nandagokula) ಪ್ರದೇಶದಲ್ಲಿ ಪುಡಿರೌಡಿಗಳು ಮತ್ತು ಕಳ್ಳಕಾಕರಿಗೆ ಪೊಲೀಸರ ಭಯವಿದ್ದಂತಿಲ್ಲ. ಬೈಕ್ ಮೇಲೆ ಬರುವ ಇಬ್ಬರು ಕಳ್ಳರು ಬೆಳ್ಳಂಬೆಳಗ್ಗೆಯೇ ರಸ್ತೆಯಲ್ಲಿ ನಡೆದುಹೋಗುತ್ತಿರುವ ಯುವಕನಿಗೆ ಲಾಂಗ್ ತೋರಿಸಿ ಅವನಿಂದ ಪರ್ಸ್, ಮೊಬೈಲ್ ಕಸಿದುಕೊಂಡು ಹೋಗುತ್ತಿದ್ದಾರೆ. ದಯವಿಟ್ಟು ಗಮನಿಸಿ.