ಚಿನ್ನದ ಅಂಗಡಿಯಿಂದ ಉಂಗುರ ಎಗರಿಸಿದ ಬುರ್ಖಾ ಧರಿಸಿ ಬಂದ ಮಹಿಳೆಯರು

Updated on: Oct 06, 2025 | 3:40 PM

ಕಲಬುರಗಿಯ ಸರಾಫ್ ಬಜಾರ್‌ನಲ್ಲಿ ಬುರ್ಖಾಧಾರಿ ಕಳ್ಳಿಯರ ಗ್ಯಾಂಗ್ ಸಕ್ರಿಯವಾಗಿದ್ದು, ಇವರು ಚಿನ್ನದ ಅಂಗಡಿಗಳನ್ನು ಗುರಿಯಾಗಿಸಿಕೊಂಡು. ಮೈಲಾಪೂರ ಚಿನ್ನದಂಗಡಿಯಲ್ಲಿ ಚಿನ್ನದ ಉಂಗುರ ನೋಡುವ ನೆಪದಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದು ಕಳ್ಳಿಯರು ಉಂಗುರವನ್ನು ಎಗರಿಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳಿಂದ ಈ ಕೃತ್ಯ ಬೆಳಕಿಗೆ ಬಂದಿದೆ.

ಕಲಬುರಗಿಯಲ್ಲಿ ಬುರ್ಖಾಧಾರಿ (Kalaburagi robbery) ಕಳ್ಳಿಯರ ಗ್ಯಾಂಗ್ ಸಕ್ರಿಯವಾಗಿ ಕಳ್ಳತನ ಚಟುವಟಿಕೆಯನ್ನು ಮಾಡುತ್ತಿದೆ. ಈ ಗ್ಯಾಂಗ್ ಚಿನ್ನದ ಅಂಗಡಿಗಳನ್ನೇ ಗುರಿಯಾಗಿಸಿಕೊಂಡಿ ಹೊಂಚು ಹಾಕುತ್ತಿದೆ. ಇತ್ತೀಚೆಗೆ ಕಲಬುರಗಿಯ ಸರಾಫ್ ಬಜಾರ್‌ನಲ್ಲಿರುವ ಮೈಲಾಪೂರ ಚಿನ್ನದಂಗಡಿಯಲ್ಲಿ ಈ ಲೇಡಿ ಗ್ಯಾಂಗ್ ತನ್ನ ಕೈಚಳಕ ತೋರಿದೆ. ಕಳ್ಳಿಯರು ಬುರ್ಖಾ ಧರಿಸಿ ಅಂಗಡಿಗೆ ಪ್ರವೇಶಿಸಿ, ಚಿನ್ನದ ಉಂಗುರಗಳನ್ನು ನೋಡುವ ನೆಪದಲ್ಲಿ ಮಾಲೀಕರ ಗಮನ ಬೇರೆಡೆ ಸೆಳೆದಿದ್ದಾರೆ. ಈ ಸಮಯವನ್ನು ಬಳಸಿಕೊಂಡು, ಚಿನ್ನದ ಉಂಗುರವೊಂದನ್ನು ಎಗರಿಸಿದ್ದಾರೆ. ಈ ಕೃತ್ಯವು ಅಂಗಡಿಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನು ಕಳ್ಳಿಯರು ಯಾರಿಗೂ ಅನುಮಾನ ಬರದಂತೆ ಬಂಗಾರದ ಅಂಗಡಿಗಳಲ್ಲಿ ಹೆಚ್ಚು ಜನದಟ್ಟಣೆ ಇರುವ ಸಮಯವನ್ನು ನೋಡಿಕೊಂಡು, ಮಾಲೀಕರ ಗಮನ ಬೇರೆಡೆ ಸೆಳೆದು, ಚಿನ್ನವನ್ನು ಕದ್ದಿದ್ದಾರೆ ಎಂದು ಹೇಳಲಾಗಿದೆ. ಇನ್ನು ಕಲಬುರಗಿ ಪೊಲೀಸರು ಈ ಕಳ್ಳರ ಗ್ಯಾಂಗ್ ಅನ್ನು ಪತ್ತೆ ಹಚ್ಚಲು ಮತ್ತು ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ತನಿಖೆ ಆರಂಭಿಸಿದ್ದಾರೆ. ಇಂತಹ ಘಟನೆಗಳಿಂದ ಚಿನ್ನದ ಅಂಗಡಿ ಮಾಲೀಕರು ಹೆಚ್ಚಿನ ಎಚ್ಚರಿಕೆ ವಹಿಸಬೇಕೆಂದು ಪೊಲೀಸರು ಮನವಿ ಮಾಡಿದ್ದಾರೆ. ಸಾರ್ವಜನಿಕರೂ ಸಹ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುವಂತೆ ಕೇಳಿಕೊಂಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ