ನೀರು ಕೊಡದಿದ್ದಕ್ಕೆ ಲಟ್ಟಣಿಗೆಯಿಂದ ಹೊಡೆದ ಪತಿ: ಕೋಮ ಸೇರಿದ್ದ ಪತ್ನಿ ದುರಂತ ಸಾವು
ಕ್ಷುಲ್ಲಕ ಕಾರಣಕ್ಕೆ ಪತಿಯೋರ್ವ ಲಟ್ಟಣಿಗೆಯಿಂದ ತಲೆಗೆ ಹೊಡೆದಿದ್ದಕ್ಕೆ ಪತ್ನಿ ದುರಂತ ಸಾವು ಕಂಡಿರುವ ಘಟನೆ ಬೆಂಗಳೂರಿನ ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಸೆಪ್ಟೆಂಬರ್ 24ರಂದು ನಡೆದಿದ್ದ ಘಟನೆಯು ಇದೀಗ ಬೆಳಕಿಗೆ ಬಂದಿದೆ. ಕುಡಿಯೋಕೆ ನೀರು ಕೇಳಿದ ಪತಿಗೆ ಕೊಡದೇ ಇದ್ದಾಗ ಪತ್ನಿಯ ತಲೆಗೆ ಹೊಡೆದಿದ್ದಾನೆ. ಪತಿಯ ಏಟಿಗೆ ಕೋಮಾಗೆ ಹೋಗಿದ್ದ ಪತ್ನಿ ಸದ್ಯ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ.ಮಧ್ಯಪ್ರದೇಶ ಮೂಲದ ಪ್ರೀತಿ ಸಿಂಗ್ (26) ಪತಿಯಿಂದಲೇ ಕೊಲೆಯಾದ ಪತ್ನಿ.
ಬೆಂಗಳೂರು (ಅಕ್ಟೋಬರ್.06): ಕ್ಷುಲ್ಲಕ ಕಾರಣಕ್ಕೆ ಪತಿಯೋರ್ವ ಲಟ್ಟಣಿಗೆಯಿಂದ ತಲೆಗೆ ಹೊಡೆದಿದ್ದಕ್ಕೆ ಪತ್ನಿ ದುರಂತ ಸಾವು ಕಂಡಿರುವ ಘಟನೆ ಬೆಂಗಳೂರಿನ ಪೀಣ್ಯದ ಬಳಿಯ ಚೊಕ್ಕಸಂದ್ರದಲ್ಲಿ ನಡೆದಿದೆ. ಸೆಪ್ಟೆಂಬರ್ 24ರಂದು ನಡೆದಿದ್ದ ಘಟನೆಯು ಇದೀಗ ಬೆಳಕಿಗೆ ಬಂದಿದೆ. ಕುಡಿಯೋಕೆ ನೀರು ಕೇಳಿದ ಪತಿಗೆ ಕೊಡದೇ ಇದ್ದಾಗ ಪತ್ನಿಯ ತಲೆಗೆ ಹೊಡೆದಿದ್ದಾನೆ. ಪತಿಯ ಏಟಿಗೆ ಕೋಮಾಗೆ ಹೋಗಿದ್ದ ಪತ್ನಿ ಸದ್ಯ ಚಿಕಿತ್ಸೆ ಫಲಿಸದೇ ಸಾವನಪ್ಪಿದ್ದಾರೆ.ಮಧ್ಯಪ್ರದೇಶ ಮೂಲದ ಪ್ರೀತಿ ಸಿಂಗ್ (26) ಪತಿಯಿಂದಲೇ ಕೊಲೆಯಾದ ಪತ್ನಿ. ಛೋಟೆಲಾಲ್ ಸಿಂಗ್ ಹಾಗೂ ಪ್ರೀತಿ ಸಿಂಗ್ ಗಂಡ-ಹೆಂಡತಿ. ಇಬ್ಬರೂ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು. ಸೆಪ್ಟೆಂಬರ್ 24 ರಂದು ಮನೆಗೆ ಬಂದ ಛೋಟೆಲಾಲ್ ಹೆಂಡ್ತಿ ಬಳಿ ನೀರನ್ನ ಕೇಳ್ತಾನೆ. ನಾನು ಕೆಲ್ಸಕ್ಕೆ ಹೋಗ್ಬೇಕು ನೀರು ನೀನೇ ತಗೊಂಡು ಕುಡಿ ಎಂದ್ಲಂತೆ. ಅಷ್ಟೊತ್ತಿಗಾಗಲೇ ಮದ್ಯಸೇವಿಸಿ ಬಂದಿದ್ದ ಛೋಟೆಲಾಲ್ ಲಟ್ಟಣಿಗೆಯಲ್ಲಿ ಪತ್ನಿಯ ತಲೆಗೆ ಹೊಡೆದಿದ್ದ. ಇದರಿಂದ ಗಂಭೀರವಾಗಿ ಗಾಯಗೊಂಡ ಪತ್ನಿ ಪ್ರೀತಿ ಅಲ್ಲೇ ಕೋಮಾಗೆ ಜಾರಿದ್ದಳು. ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೂಡ ನೀಡಲಾಗ್ತಿತ್ತು. ಆದ್ರೆ, ಚಿಕಿತ್ಸೆ ಸ್ಪಂದಿಸದೇ ಆಸ್ಪತ್ರೆಯಲ್ಲಿ ಪ್ರೀತಿ ಕೊನೆಯುಸಿರೆಳೆದಿದ್ದಾಳೆ. ಇದೀಗ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿ ಛೋಟೆಸಿಂಗ್‌ನನ್ನ ಬಂಧಿಸಲಾಗಿದ್ದು, ಪೀಣ್ಯ ಪೊಲೀಸರಿಂದ ತನಿಖೆ ಮುಂದುವರಿದಿದೆ.

