Bangalore Rains: ಮಳೆ ಅಬ್ಬರಕ್ಕೆ ಶಾಂತಿನಗರದಲ್ಲಿ ಭಾಗಶಃ ಮುಳುಗಿದ ಬಸ್​ಗಳು, ಡಿಪೋದಿಂದ ಹೊರ ತೆಗೆಯಲಾಗದೆ ಹೈರಾಣಾದ ಸಿಬ್ಬಂದಿ

Updated on: May 19, 2025 | 8:00 AM

ಬೆಂಗಳೂರು ಮಳೆ: ಒಂದೆರಡು ದಿನ ಸುರಿದ ಮಳೆ ಬೆಂಗಳೂರಿನಲ್ಲಿ ಭಾರಿ ಅನಾಹುತಗಳನ್ನೇ ಸೃಷ್ಟಿಸಿದೆ. ಭಾನುವಾರ ರಾತ್ರಿಯಿಡೀ ಸುರಿದ ಮಳೆಯಿಂದಾಗಿ ಬೆಂಗಳೂರಿನ ಶಾಂತಿನಗರ ಬಸ್ ಡಿಪೋ ಜಲಾವೃತಗೊಂಡಿದೆ. ಬಿಎಂಟಿಸಿ ಬಸ್​​ಗಳು ಭಾಗಶಃ ಮುಳುಗಡೆಯಾಗಿದ್ದರಿಂದ ಬೆಳಗ್ಗೆ ಕರ್ತವ್ಯಕ್ಕೆಂದು ಬಂದ ಸಿಬ್ಬಂದಿ ಬಸ್​​ಗಳನ್ನು ಹೊರ ತೆಗೆಯಲಾಗದೆ ಒದ್ದಾಡಿದರು. ವಿಡಿಯೋ ಇಲ್ಲಿದೆ ನೋಡಿ.

ಬೆಂಗಳೂರು, ಮೇ 19: ಬೆಂಗಳೂರು ನಗರದಾದ್ಯಂತ ಭಾನುವಾರ ರಾತ್ರಿ ಸುರಿದ ಭಾರಿ ಮಳೆ ಅನೇಕ ಅವಾಂತರಗಳನ್ನು ಸೃಷ್ಟಿಸಿದೆ. ವರುಣಾರ್ಭಟಕ್ಕೆ ಶಾಂತಿನಗರ ಬಸ್ ಡಿಪೋದಲ್ಲಿ ಬಿಎಂಟಿಸಿ ಬಸ್​​ಗಳು ಭಾಗಶಃ ಮುಳುಗಿವೆ. ಶಾಂತಿ ನಗರ ಬಸ್​ ಡಿಪೋ ಪೂರ್ತಿ ಜಲಾವೃತಗೊಂಡಿದೆ. ಇದರಿಂದಾಗಿ ಬೆಳಗ್ಗೆ ಡ್ಯೂಟಿಗೆ ಬಂದ ಬಿಎಂಟಿಸಿ ಸಿಬ್ಬಂದಿಗೆ ಶಾಕ್ ಎದುರಾಗಿದೆ. ಡಿಪೋದಿಂದ ಬಸ್​ ಹೊರ ತೆಗೆಯಲಾಗದೆ ಸಂಕಷ್ಟ ಅನುಭವಿಸಬೇಕಾಗಿ ಬಂತು.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More