ಬಿವೈ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ; ಸಂಸದ ಪ್ರತಾಪ್​ ಸಿಂಹ ಏನಂದ್ರು ಗೊತ್ತಾ?

| Updated By: ಕಿರಣ್ ಹನುಮಂತ್​ ಮಾದಾರ್

Updated on: Nov 10, 2023 | 10:13 PM

ಯುವಕರನ್ನ ಸೆಳೆಯಲು ಯುವಕರನ್ನೇ ನೇಮಕ ಮಾಡಲಾಗಿದೆ. ಯುವಕರಿಗೆ ಮನ್ನಣೆ ಹಾಕಿರುವುದು ಬಿಜೆಪಿಯಲ್ಲಿ ಇದು ಹೊಸದಲ್ಲ. ಈ ಸಂಪ್ರದಾಯ ಮೊದಲಿನಿಂದಲೂ ಇದೆ. ಫಡ್ನವಿಸ್ ಅವರಿಗೆ ಚಿಕ್ಕ ವಯಸ್ಸಿಗೆ ಅಧಿಕಾರ ನೀಡಲಾಗಿತ್ತು. ಅದೇ ರೀತಿ ವಿಜಯೇಂದ್ರರಿಗೆ ಯುವಕರನ್ನ ಸೆಳೆಯುವ ಶಕ್ತಿ ಇದೆ ಎಂದು ಸಂಸದ ಪ್ರತಾಪ್​ ಸಿಂಹ ಹೇಳಿದರು.

ಮೈಸೂರು, ನ.10: ಬಿಜೆಪಿಯಲ್ಲಿ ಯುವಕರಿಗೆ ಮನ್ನಣೆ ನೀಡಲಾಗಿದೆ. ಜನರು ಹೊಸತನ ಕೇಳುತ್ತಿದ್ದು, ಬಿವೈ ವಿಜಯೇಂದ್ರ(BY Vijayendra) ರಾಜ್ಯಾಧ್ಯಕ್ಷರಾಗಿ ನೇಮಕವಾಗಿರುವುದು ಪಕ್ಷದ ದೃಷ್ಟಿಯಿಂದ ಅನುಕೂಲವಾಗಲಿದೆ ಎಂದು ಸಂಸದ ಪ್ರತಾಪ್​ ಸಿಂಹ(Pratap Simha) ಹೇಳಿದರು. ಮೈಸೂರಿನಲ್ಲಿ ಮಾಧ್ಯಮ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು ‘ಯುವಕರನ್ನ ಸೆಳೆಯಲು ಯುವಕರನ್ನೇ ನೇಮಕ ಮಾಡಲಾಗಿದೆ. ಯುವಕರಿಗೆ ಮನ್ನಣೆ ಹಾಕಿರುವುದು ಬಿಜೆಪಿಯಲ್ಲಿ ಇದು ಹೊಸದಲ್ಲ. ಈ ಸಂಪ್ರದಾಯ ಮೊದಲಿನಿಂದಲೂ ಇದೆ. ಫಡ್ನವಿಸ್ ಅವರಿಗೆ ಚಿಕ್ಕ ವಯಸ್ಸಿಗೆ ಅಧಿಕಾರ ನೀಡಲಾಗಿತ್ತು. ಅದೇ ರೀತಿ ವಿಜಯೇಂದ್ರರಿಗೆ ಯುವಕರನ್ನ ಸೆಳೆಯುವ ಶಕ್ತಿ ಇದೆ. ಲೋಕಸಭಾ ಚುನಾವಣೆ ನಮ್ಮ ದೇವರು ಮೋದಿ ಹೆಸರಿನಲ್ಲಿ ನಡೆಯಲಿದೆ. ಲೋಕಸಭಾ ಚುನಾವಣೆಗೂ ಇದಕ್ಕೂ ಸಂಬಂಧ ಇಲ್ಲ. ಆದ್ರೆ, ವಿಜಯೇಂದ್ರ ರಾಜ್ಯ ರಾಜಕಾರಣಕ್ಕೆ ಸಮರ್ಥ ನಾಯಕ ಎಂದು ಹೇಳಿದರು.

ರಾಜ್ಯದ ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ