ಅಧಿಕಾರವಹಿಸಿಕೊಳ್ಳುವ ಮೊದಲು ತಂದೆಯ ಪಾದಗಳಿಗೆ ನಮಸ್ಕರಿಸಿದ ನೂತನ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ

|

Updated on: Nov 15, 2023 | 12:01 PM

ವಿಜಯೇಂದ್ರಗೆ ಕುರ್ಚಿ ತೆರವು ಮಾಡಿ ಅದರಲ್ಲಿ ಕುಳ್ಳಿರಿಸಿದ ಬಳಿಕ ಕಟೀಲ್, ಕೇಸರಿ ಶಾಲನ್ನು ಹೊದಿಸಿ, ಹಾರ ಹಾಕಿ ಒಂದು ಹೊತ್ತಿಗೆಯನ್ನು ನೀಡುತ್ತಾರೆ. ಪ್ರಾಯಶಃ ಅದು ಭಗವದ್ಗೀತೆಯ ಪ್ರತಿ ಇರಬಹುದು. ಅರ್ಚಕರು ವಿಜಯೇಂದ್ರ ಹಣಗೆ ತಿಲಕವಿಟ್ಟ ನಂತರ ಖುದ್ದು ಬಿಎಸ್ ಯಡಿಯೂರಪ್ಪ ನೂತನ ರಾಜ್ಯಾಧ್ಯಕ್ಷನಿಗೆ ಹೂವಿನ ಹಾರ ಹಾಕುತ್ತಾರೆ.

ಬೆಂಗಳೂರು: ಬಿವೈ ವಿಜಯೇಂದ್ರ (BY Vijayendra) ಈಗ ಅಧಿಕೃತವಾಗಿ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ. ಹುದ್ದೆಯಿಂದ ನಿರ್ಗಮಿಸಿದ ನಳಿನ್ ಕುಮಾರ್ ಕಟೀಲ್ (Nalin Kumar Kateel) ಅವರಿಂದ ಅಧಿಕಾರವಹಿಸಿಕೊಳ್ಳುವ ಮೊದಲು ಅವರು ತಮ್ಮ ತಂದೆ ಬಿಎಸ್ ಯಡಿಯೂರಪ್ಪ (BS Yediyurappa) ಮತ್ತು ಇತರ ಕೆಲ ಹಿರಿಯ ನಾಯಕರ ಪಾದಗಳಿಗೆ ನಮಸ್ಕರಿಸಿದರು. ಪಕ್ಷದ ಕಚೇರಿಯಲ್ಲಿರುವ ಅಧ್ಯಕ್ಷರ ಕೋಣೆಯಲ್ಲಿ ಕಟೀಲ್ ಅಧಿಕಾರ ಹಸ್ತಾಂತರಿಸುವುದನ್ನು ನೋಡಬಹುದು. ವಿಜಯೇಂದ್ರಗೆ ಕುರ್ಚಿ ತೆರವು ಮಾಡಿ ಅದರಲ್ಲಿ ಕುಳ್ಳಿರಿಸಿದ ಬಳಿಕ ಕಟೀಲ್, ಕೇಸರಿ ಶಾಲನ್ನು ಹೊದಿಸಿ, ಹಾರ ಹಾಕಿ ಒಂದು ಹೊತ್ತಿಗೆಯನ್ನು ನೀಡುತ್ತಾರೆ. ಪ್ರಾಯಶಃ ಅದು ಭಗವದ್ಗೀತೆಯ ಪ್ರತಿ ಇರಬಹುದು. ಅರ್ಚಕರು ವಿಜಯೇಂದ್ರ ಹಣಗೆ ತಿಲಕವಿಟ್ಟ ನಂತರ ಖುದ್ದು ಬಿಎಸ್ ಯಡಿಯೂರಪ್ಪ ನೂತನ ರಾಜ್ಯಾಧ್ಯಕ್ಷನಿಗೆ ಹೂವಿನ ಹಾರ ಹಾಕುತ್ತಾರೆ. ಆಗಲೂ ವಿಜಯೇಂದ್ರ ತಂದೆ ಕಾಲುಮುಟ್ಟಿ ನಮಸ್ಕರಿಸುತ್ತಾರೆ. ಮಾಜಿ ಸಚಿವರಾದ ಆರ್ ಅಶೋಕ, ಗೋವಿಂದ ಕಾರಜೋಳ, ಮುನಿರತ್ನ ನಾಯ್ಡು, ಆರಗ ಜ್ಞಾನೇಂದ್ರ, ಶ್ರೀರಾಮುಲು, ಗೋಪಾಲಯ್ಯ, ಪ್ರಭು ಚೌಹಾಣ್, ಸಂಸದ ತೇಜಸ್ವಿ ಸೂರ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ