ಬಿಕ್ಲು ಶಿವ ಕೊಲೆ ಪ್ರಕರಣ: ವಿಚಾರಣೆಯಲ್ಲಿ ತನಿಖಾಧಿಕಾರಿ ಕೇಳಿದ ಪ್ರಶ್ನೆಗಳ ವಿವರಣೆ ಭೈರತಿ ಬಸವರಾಜ ನೀಡಲಿಲ್ಲ

ಅರುಣ್​ ಕುಮಾರ್​ ಬೆಳ್ಳಿ

Updated on: Jul 19, 2025 | 8:24 PM

ಮಂಗಳವಾರ ರಾತ್ರಿ ಭೀಕರವಾಗಿ ಹತ್ಯೆಗೊಳಗಾದ ಬಿಕ್ಲು ಶಿವನ ತಾಯಿ ವಿಜಯಲಕ್ಷ್ಮಿ ದಾಖಲಿಸಿದ ದೂರಿನ ಅನ್ವಯ ಶಾಸಕ ಭೈರತಿ ಬಸವರಾಜ ಸೇರಿದಂತೆ ಐವರ ವಿರುದ್ಧ ಎಫ್​ಐಆರ್ ದಾಖಲಾಗಿದೆ. ತನ್ನ ಮಗನ ಕೊಲೆಯಲ್ಲಿ ಬಸವರಾಜ ಪಾತ್ರ ಏನೂ ಇಲ್ಲವೆಂದು ನಂತರ ವಿಜಯಲಕ್ಷ್ಮಿ ಹೇಳಿದರೂ ಅವರ ಹೆಸರು ಎಫ್ಐಆರ್ ನಲ್ಲಿ ದಾಖಲಾಗಿರುವ ಕಾರಣ ವಿಚಾರಣೆಗೆ ಕರೆಸಲಾಗಿತ್ತು.

ಬೆಂಗಳೂರು, ಜುಲೈ 19: ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ಬೆಂಗಳೂರು ಕೆಆರ್ ಪುರಂ ಬಿಜೆಪಿ ಶಾಸಕ ಭೈರತಿ ಬಸವರಾಜ ಇಂದು ಭಾರತಿ ನಗರ ಪೊಲೀಸ್ ಠಾಣೆಗೆ ತೆರಳಿ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಯ ಎದುರು ವಿಚಾರಣೆ ಎದುರಿಸಿದರು. ಹೊರಗೆ ಬಂದ ಬಳಿಕ ಅವರು ಮಾಧ್ಯಮದವವರಿಗೆ ಪೊಲೀಸ್ ಅಧಿಕಾರಿ ಕೇಳಿದ ಪ್ರಶ್ನೆಗಳ ವಿವರ ನೀಡಲಿಲ್ಲ. ಅದನ್ನೆಲ್ಲ ಹೇಳಕ್ಕಾಗಲ್ಲ, ಬುಧವಾರ ಅಂದರೆ ಜುಲೈ 23ರಂದು ಮತ್ತೇ ವಿಚಾರಣೆ ನಡೆಯುತ್ತದೆ, ಹಾಜರಾಗಬೇಕೆಂದು ಹೇಳಿದರು ಎಂದಷ್ಟೇ ಹೇಳಿದರು. ಪತ್ರಕರ್ತರೊಬ್ಬರು ಜಗ ಎಷ್ಟ ವರ್ಷಗಳಿಂದ ಪರಿಚಯ ಅಂತ ಕೇಳಿದಾಗ, ಯಾವ ಜಗನೂ ಪರಿಚಯವಿಲ್ಲ ಎಂದು ಬಸವರಾಜ ಹೇಳಿದರು.

ಇದನ್ನೂ ಓದಿ:   ಶಿವಪ್ರಕಾಶ್ ಯಾರು ಅನ್ನೋದೇ ಗೊತ್ತಿಲ್ಲ, ದೂರು ಕೊಟ್ಟ ಮಾತ್ರಕ್ಕೆ ಎಫ್​ಐಅರ್ ಆಗುತ್ತದೆಯೇ? ಭೈರತಿ ಬಸವರಾಜ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.