AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಿಕ್ಲು ಶಿವ ಕೊಲೆ ಕೇಸ್: ಭೈರತಿ ಬಸವರಾಜ ಕೈವಾಡ ಇದೆ ಎಂದವರೇ ಈಗ ಅವರ ಪಾತ್ರವೇನೂ ಇಲ್ಲವೆನ್ನುತ್ತಿದ್ದಾರೆ: ಪರಮೇಶ್ವರ್

ಬಿಕ್ಲು ಶಿವ ಕೊಲೆ ಕೇಸ್: ಭೈರತಿ ಬಸವರಾಜ ಕೈವಾಡ ಇದೆ ಎಂದವರೇ ಈಗ ಅವರ ಪಾತ್ರವೇನೂ ಇಲ್ಲವೆನ್ನುತ್ತಿದ್ದಾರೆ: ಪರಮೇಶ್ವರ್

ಅರುಣ್​ ಕುಮಾರ್​ ಬೆಳ್ಳಿ
|

Updated on:Jul 18, 2025 | 12:59 PM

Share

ಭೈರತಿ ಬಸವರಾಜ ಹೆಸರು ಸುಖಾಸುಮ್ಮನೆ ಕೊಲೆ ಪ್ರಕರಣದಲ್ಲಿ ಎಳೆತರಲಾಗುತ್ತಿದೆ, ಇದೊಂದು ಷಡ್ಯಂತ್ರ ಅಂತ ಬಿಜೆಪಿ ನಾಯಕರು ಹೇಳುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಪರಮೇಶ್ವರ್, ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ದೂಷಿಸುವುದು ಹೊಸದೇನಲ್ಲ, ಆದರೆ ಪೊಲೀಸರು ಕಾನೂನಿನ ಚೌಕಟ್ಟಿನೊಳಗೆ ಕೆಲಸ ಮಾಡುತ್ತಾರೆ, ವಿಚಾರಣೆಯಲ್ಲಿ ಯಾರೆಲ್ಲ ತಪ್ಪಿತಸ್ಥರು ಅಂತ ಗೊತ್ತಾಗುತ್ತದೆ ಎಂದರು.

ಬೆಂಗಳೂರು, ಜುಲೈ 18: ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ದೂರುದಾರೆ ದೊಡ್ಡವರ ಕೈವಾಡವಿದೆ ಅಂತ ಬಿಜೆಪಿ ಶಾಸಕ ಭೈರತಿ ಬಸವರಾಜ (BJP MLA Byrathi Basavaraj) ಹೆಸರನ್ನು ದೂರಿನಲ್ಲಿ ದಾಖಲಿಸಿದ್ದರು, ಆದರೆ ಈಗ ಅವರೇ ಠಾಣೆಗೆ ಬಂದು ಶಾಸಕರ ಪಾತ್ರವೇನೂ ಇಲ್ಲ ಎಂದು ಹೇಳುತ್ತಿದ್ದಾರೆ ಎಂದು ಗೃಹ ಸಚಿವ ಜಿ ಪರಮೇಶ್ವರ್ ಹೇಳಿದರು. ಮಾಧ್ಯಮಗಳೊಂದಿಗೆ ಮಾತಾಡಿದ ಅವರು, ಈಗಾಗಲೇ ಎಫ್​ಐಆರ್ ನಲ್ಲಿ ಶಾಸಕರ ಹೆಸರು ನಮೂದಾಗಿರುವುದರಿಂದ ಪೊಲೀಸರು ಅವರನ್ನು ಕರೆಸಿ ವಿಚಾರಣೆ ನಡೆಸುತ್ತಾರೆ, ಅವರ ಪಾತ್ರ ಇದೆಯಾ ಇಲ್ಲವಾ ಅನ್ನೋದು ವಿಚಾರಣೆಯ ನಂತರ ಗೊತ್ತಾಗುತ್ತದೆ ಎಂದು ಪರಮೇಶ್ವರ್ ಹೇಳಿದರು.

ಇದನ್ನೂ ಓದಿ: ಬಿಕ್ಲು ಶಿವ ಕೊಲೆ ಪ್ರಕರಣ; ಶಾಸಕನನ್ನು ಬಂಧಿಸಿಲ್ಲ, ತನಿಖೆ ನಡೆಯುತ್ತಿದೆ: ಸೀಮಂತ್ ಕುಮಾರ್ ಸಿಂಗ್, ಪೊಲೀಸ್ ಆಯುಕ್ತ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Published on: Jul 18, 2025 12:56 PM