ತುಮಕೂರು: ಕುರುಬ ಸಾಹಿತಿಗಳ ಸಾಂಸ್ಕೃತಿಕ ಸಮಾವೇಶದಲ್ಲಿ ಸಿದ್ದರಾಮಯ್ಯ-ಪರಮೇಶ್ವರ್ ಆತ್ಮೀಯತೆ

ಅರುಣ್​ ಕುಮಾರ್​ ಬೆಳ್ಳಿ

Updated on: Apr 19, 2025 | 5:23 PM

ರಾಜ್ಯದೆಲ್ಲೆಡೆ ಈಗ ಜಾತಿ ಗಣತಿ ವರದಿಯ ಚರ್ಚೆ ನಡೆಯುತ್ತಿದೆ. ಶ್ರೀದೇವಿ ಮೆಡಿಕಲ್ ಕಾಲೇಜು ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯವರನ್ನು ಮನಸಾರೆ ಹೊಗಳಿದ ಪರಮೇಶ್ವರ್, ದೇಶಕ್ಕೆ ಮಾದರಿಯಾಗುವ ತೀರ್ಪನ್ನು ಸಿದ್ದರಾಮಯ್ಯ ತೆಗೆದುಕೊಳ್ಳಲಿದ್ದಾರೆ ಅನ್ನುತ್ತಾರೆ. ಅವರು ಜಾತಿ ಗಣತಿ ವರದಿಗೆ ಸಂಬಂಧಿಸಿದಂತೆ ಈ ಮಾತನ್ನು ಹೇಳಿರಬಹುದೇ?

ತುಮಕೂರು, ಏಪ್ರಿಲ್ 19: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ ಪರಮೇಶ್ವರ್ ನಡುವೆ ಕನಿಷ್ಟ ನಾಲ್ಕ ದಶಕಗಳ ಸ್ನೇಹವಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿರುವುದರಿಂದ ಪರಮೇಶ್ವರ್ ತಮ್ಮ ಮಿತಿಯನ್ನು ದಾಟಲಾರರು. ಇವತ್ತು ತುಮಕೂರುನಲ್ಲಿ ಕುರುಬ ಸಾಹಿತಿಗಳ ಸಾಂಸ್ಕೃತಿಕ ಸಮಾವೇಶ (Kuruba Litterateurs Cultural Convention) ನಡೆಯಿತು. ಪರಮೇಶ್ವರ್ ತಮ್ಮ ಭಾಷಣಕ್ಕೆ ಮೊದಲು ಸಿದ್ದರಾಮಯ್ಯ ಜೊತೆ ಮಾತಾಡುವಾಗ ಬೇರೆ ಕೆಲಸದ ನಿಮಿತ್ತ ಬೇರೆ ಕಡೆ ಹೋಗಬೇಕಿರವುದನ್ನು ತಿಳಿಸುತ್ತಾರೆ. ಭಾಷಣ ಮಾಡಿ ವಾಪಸ್ಸು ತಮ್ಮ ಜಾಗಕ್ಕೆ ಅವರು ಬಂದಾಗ ಮತ್ತೊಮ್ಮೆ ಅನುಮತಿ ಕೇಳಲು ಆಸ್ಪದವೀಯದ ಸಿದ್ದರಾಮಯ್ಯ, ಅಯ್ತು ನೀವು ಹೊರಡಿ ಅನ್ನುತ್ತಾರೆ.

ಇದನ್ನೂ ಓದಿ:   ಕರ್ನಾಟಕದಲ್ಲಿ ರೋಹಿತ್ ವೇಮುಲ ಕಾಯ್ದೆ ಜಾರಿ ಮಾಡುತ್ತೇವೆ: ಸಿದ್ದರಾಮಯ್ಯ

ವಿಡಿಯೋ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಅರುಣ್​ ಕುಮಾರ್​ ಬೆಳ್ಳಿ

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.