25.20 ಕೋಟಿ ರೂ.ಗೆ ಖರೀದಿಯಾದರೂ ಗ್ರೀನ್ ಖಾತೆಗೆ ಸೇರುವುದು 18 ಕೋಟಿ ರೂ. ಮಾತ್ರ
Cameron Green IPL 2026 Auction: ಐಪಿಎಲ್ 2026 ಮಿನಿ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಅವರನ್ನು ಕೆಕೆಆರ್ ₹25.2 ಕೋಟಿಗೆ ಖರೀದಿಸಿ ದಾಖಲೆ ಸೃಷ್ಟಿಸಿದೆ. ಗ್ರೀನ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ವಿದೇಶಿ ಆಟಗಾರರಾದರು. ಆದರೆ, ಬಿಸಿಸಿಐ ನಿಯಮದಂತೆ ಅವರಿಗೆ ₹18 ಕೋಟಿ ಮಾತ್ರ ಸಿಗಲಿದ್ದು, ಹೆಚ್ಚುವರಿ ₹7.2 ಕೋಟಿ ಆಟಗಾರರ ಕಲ್ಯಾಣ ನಿಧಿಗೆ ಸೇರಲಿದೆ. ಹಣಕಾಸಿನ ಶಿಸ್ತು ಕಾಪಾಡಲು ಈ ನಿಯಮ ಜಾರಿಯಲ್ಲಿದೆ.
ಆಸ್ಟ್ರೇಲಿಯಾದ ಆಲ್‌ರೌಂಡರ್ ಕ್ಯಾಮರೂನ್ ಗ್ರೀನ್ ಮೇಲೆ ಐಪಿಎಲ್ 2026 ರ ಮಿನಿ ಹರಾಜಿನಲ್ಲಿ ಹಣದ ಸುರಿಮಳೆಯಾಗಿದೆ. ಗ್ರೀನ್ಗಾಗಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ತೀವ್ರ ಪೈಪೋಟಿ ನಡೆಯಿತು. ಆದರೆ ಕೊನೆಯಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಗ್ರೀನ್ಗೆ 25.20 ಕೋಟಿ ರೂ. ನೀಡಿ ತಂಡಕ್ಕೆ ಖರೀದಿಸಿತು. ಇಷ್ಟು ದೊಡ್ಡ ಮೊತ್ತವನ್ನು ಪಡೆಯುವ ಮೂಲಕ, ಕ್ಯಾಮರೂನ್ ಗ್ರೀನ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಮಾರಾಟವಾದ ವಿದೇಶ ಆಟಗಾರ ಎನಿಸಿಕೊಂಡಿದ್ದಾರೆ. ಈ ಹಿಂದೆ, ಈ ದಾಖಲೆಯನ್ನು ಮಿಚೆಲ್ ಸ್ಟಾರ್ಕ್ ಹೊಂದಿದ್ದರು, ಅವರನ್ನು ಕೆಕೆಆರ್ 24.75 ಕೋಟಿ ರೂ.ಗೆ ಖರೀದಿಸಿತ್ತು. ಆದಾಗ್ಯೂ, ಇಷ್ಟು ದೊಡ್ಡ ಮೊತ್ತವನ್ನು ಪಡೆದಿದ್ದರೂ, ಕ್ಯಾಮರೂನ್ ಗ್ರೀನ್ ಖಾತೆಗೆ ಹೋಗುವುದು ಕೇವಲ 18 ಕೋಟಿ ಮಾತ್ರ. ಉಳಿದ 7.20 ಕೋಟಿ ರೂ ಹಣ ಮತ್ತೆ ಬಿಸಿಸಿಐ ಪಾಲಾಗಲಿದೆ.
ಕೆಕೆಆರ್ ತಂಡವು ಕ್ಯಾಮರೂನ್ ಗ್ರೀನ್ ಅವರನ್ನು 25.2 ಕೋಟಿಗೆ ರೂ. ಖರೀದಿಸಿತು. ಆದರೆ ಈ ಮೊತ್ತದಿಂದ 7.2 ಕೋಟಿ ರೂಗಳನ್ನು ಕಡಿತಗೊಳಿಸಲಾಗುತ್ತದೆ. ವಾಸ್ತವವಾಗಿ ಯಾವುದೇ ವಿದೇಶಿ ಆಟಗಾರನಿಗೆ 18 ಕೋಟಿಗಿಂತ ಹೆಚ್ಚಿನ ಮೊತ್ತ ಸಿಗಬಾರದು ಎಂಬ ನಿಯಮವನ್ನು ಬಿಸಿಸಿಐ ರೂಪಿಸಿದೆ. ಆದಗ್ಯೂ ಹರಾಜಿನಲ್ಲಿ ಇದಕ್ಕಿಂತ ಹೆಚ್ಚಿನ ಮೊತ್ತ ಪಡೆದರೆ, ಉಳಿದ ಹಣವನ್ನು ಆಟಗಾರರ ಕಲ್ಯಾಣಕ್ಕಾಗಿ ಬಿಸಿಸಿಐ ಖರ್ಚು ಮಾಡಲಿದೆ. ಹಣಕಾಸಿನ ಶಿಸ್ತನ್ನು ಕಾಪಾಡಿಕೊಳ್ಳುವುದು ಮತ್ತು ಮಿನಿ ಹರಾಜಿನಲ್ಲಿ ಅತಿಯಾದ ಬಿಡ್‌ಗಳನ್ನು ತಡೆಯುವುದು ಇದರ ಉದ್ದೇಶವಾಗಿದೆ.