ಕಲಬುರಗಿ: ಕಂಡಕ್ಟರ್ ಹುದ್ದೆಗೆ ಅವಶ್ಯಕತೆಗಿಂತ ಕಡಿಮೆ ತೂಕವಿದ್ದ ಅಭ್ಯರ್ಥಿಗಳು ಏನೆಲ್ಲ ಮಾಡಿದ್ದಾರೆ ಅಂತ ನೋಡಿ!
ಒಬ್ಬ ತನ್ನ ತೊಡೆಗಳಿಗೆ ಕಬ್ಬಿಣದ ತುಂಡುಗಳನ್ನು ಕಟ್ಟಿಕೊಂಡು ಬಂದಿದ್ದರೆ ಇನ್ನೊಬ್ಬ 5 ಕೆಜಿ ತೂಕದ ಕಲ್ಲನ್ನು ಎಲ್ಲಿ ಬಚ್ಟಿಟ್ಟುಕೊಂಡಿದ್ದಾನೆ ಅಂತ ನೋಡಿ. ಅವನಿಗೆ ದೇಹದಲ್ಲಿ ಬೇರ್ಯಾವುದೇ ಜಾಗ ಸಿಗಲಿಲ್ಲವೇ!?
ಕಲಬುರಗಿ: ವಿಡಿಯೋ ನೋಡುತ್ತಿದ್ದರೆ ನೇಮಕಾತಿಗೆ ಸಂಬಂಧಿಸಿದ ಜಾಸ್ತಿ ಅವ್ಯವಹಾರಗಳು ಕಲಬುರಗಿಯಲ್ಲಿ ನಡೆಯುತ್ತವೆಯೇ ಎಂಬ ಸಂಶಯ ಹುಟ್ಟುತ್ತದೆ. ಪಿಎಸ್ ಐ ನೇಮಕಾತಿ ಹಗರಣ ಬಯಲಾಗಿದ್ದು ಇದೇ ನಗರದಲ್ಲಿ. ಈಗ ಕಂಡಕ್ಟರ್ (conductor) ಹುದ್ದೆಗೆ ನಡೆಯತ್ತಿರುವ ದೇಹದಾರ್ಢ್ಯ ಪರೀಕ್ಷೆಯಲ್ಲಿ (physical fitness) ಹುದ್ದೆಗೆ ಅವಶ್ಯಕತೆಯಿರುವ ತೂಕಕ್ಕಿಂತ ಕಡಿಮೆ ಇರುವ ಅಭ್ಯರ್ಥಿಗಳು ಮಾಪನಯಂತ್ರದಲ್ಲಿ ಅದು ಹೆಚ್ಚಾಗಿ ಕಾಣಲು ಏನು ಮಾಡಿದ್ದಾರೆ ಅಂತ ಗಮನಿಸಿ. ಒಬ್ಬ ತನ್ನ ತೊಡೆಗಳಿಗೆ ಕಬ್ಬಿಣದ ತುಂಡುಗಳನ್ನು ಕಟ್ಟಿಕೊಂಡು ಬಂದಿದ್ದರೆ ಇನ್ನೊಬ್ಬ 5 ಕೆಜಿ ತೂಕದ ಕಲ್ಲನ್ನು ಎಲ್ಲಿ ಬಚ್ಟಿಟ್ಟುಕೊಂಡಿದ್ದಾನೆ ಅಂತ ನೋಡಿ. ಅವನಿಗೆ ದೇಹದಲ್ಲಿ ಬೇರ್ಯಾವುದೇ ಜಾಗ ಸಿಗಲಿಲ್ಲವೇ!? ಆದರೆ, ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆಯ (KKRTC) ಅಧಿಕಾರಿಗಳು ಅವರ ಕಳ್ಳಾಟವನ್ನು ಬಯಲು ಮಾಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published on: Feb 10, 2023 12:23 PM