Assembly Polls | ಹಾಸನದ ರಾಜಕಾರಣಕ್ಕೆ ಪ್ರಸ್ತುತವಾಗಿ ಭವಾನಿ ರೇವಣ್ಣ ಅನಿವಾರ್ಯ ಅಲ್ಲ: ಹೆಚ್ ಡಿ ಕುಮಾರಸ್ವಾಮಿ

Assembly Polls | ಹಾಸನದ ರಾಜಕಾರಣಕ್ಕೆ ಪ್ರಸ್ತುತವಾಗಿ ಭವಾನಿ ರೇವಣ್ಣ ಅನಿವಾರ್ಯ ಅಲ್ಲ: ಹೆಚ್ ಡಿ ಕುಮಾರಸ್ವಾಮಿ

ಅರುಣ್​ ಕುಮಾರ್​ ಬೆಳ್ಳಿ
|

Updated on:Feb 10, 2023 | 2:04 PM

ಅಂತಿಮವಾಗಿ ಅಭ್ಯರ್ಥಿ ಯಾರು ಅನ್ನೋದನ್ನು ಪಕ್ಷದ ವೇದಿಕೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಹೇಳಿದ ಕುಮಾರಸ್ವಾಮಿ, ಹಾಸನ ರಾಜಕೀಯಕ್ಕೆ ಭವಾನಿ ರೇವಣ್ಣ ಅವರು ಅನಿವಾರ್ಯ ಅಲ್ಲ ಎಂದರು.

ಬೆಳಗಾವಿ: ಪಂಚರತ್ನ ಯಾತ್ರೆ ಭಾಗವಾಗಿ ಬೆಳಗಾವಿಗೆ ಆಗಮಿಸಿರುವ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಅವರು ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡುವಾಗ ಮತ್ತೊಮ್ಮೆ ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿ ಯಾರು ಅನ್ನೋದನ್ನು ಸ್ಪಷ್ಟಪಡಿಸದೆ ಗೊಂದಲ ಮೂಡಿಸುವ ಹೇಳಿಕೆ ನೀಡಿದರು. ಪಕ್ಷದ ಚೌಕಟ್ಟಿನಲ್ಲಿ ನಡೆದಿರುವ ಚರ್ಚೆಯ ಪ್ರಕಾರ ಹೆಚ್ ಡಿ ರೇವಣ್ಣ (HD Revanna) ಅವರನ್ನು ಹೊಳೆನರಸೀಪುರ ಮತ್ತು ಹಾಸನ ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ. ಪಕ್ಷ ಗೆಲ್ಲುವ ಅಭ್ಯರ್ಥಿಯ ಶೋಧದಲ್ಲಿದೆ, ಅಂತಿಮವಾಗಿ ಅಭ್ಯರ್ಥಿ ಯಾರು ಅನ್ನೋದನ್ನು ಪಕ್ಷದ ವೇದಿಕೆಯಲ್ಲಿ ತೀರ್ಮಾನಿಸಲಾಗುತ್ತದೆ ಎಂದು ಹೇಳಿದ ಕುಮಾರಸ್ವಾಮಿ, ಹಾಸನ ರಾಜಕೀಯಕ್ಕೆ ಭವಾನಿ ರೇವಣ್ಣ (Bhavani Revanna) ಅವರು ಅನಿವಾರ್ಯ ಅಲ್ಲ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Feb 10, 2023 02:01 PM