ಮೈಸೂರು ಅರಮನೆಗೆ ಬಂದ ಅಭಿಮನ್ಯುಗೆ ಅದ್ಧೂರಿ ಸ್ವಾಗತ: 10 ಕೆಜಿ ತೂಕದ ಪೇಟ, ಮೋಸಂಬಿ ಹಾರದ ಜೊತೆ ವೆಲ್ಕಮ್
ಮೈಸೂರು ದಸರಾ 2026ರ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಕ್ಯಾಪ್ಟನ್ ಅಭಿಮನ್ಯು ಆಗಮನಕ್ಕೆ ಅಭಿಮನ್ಯು ಅಭಿಮಾನಿ ಬಳಗದಿಂದ ಭವ್ಯ ಸ್ವಾಗತ ಲಭಿಸಿದೆ. ಈ ಸಂದರ್ಭದಲ್ಲಿ ಬೃಹತ್ ಗಾತ್ರದ ಮೋಸಂಬಿ ಹಾರವನ್ನು ಅಭಿಮನ್ಯುಗೆ ಸಮರ್ಪಿಸಲಾಯಿತು. ಅಷ್ಟೇ ಅಲ್ಲದೆ, 160 ಇಂಚು ಉದ್ದ ಮತ್ತು 10 ಕೆಜಿ ತೂಕದ ಬೃಹತ್ ಪೇಟವನ್ನು ಗಂಧದಗುಡಿ ಫೌಂಡೇಶನ್ ಹಾಗೂ ಅಭಿಮನ್ಯು ಅಭಿಮಾನಿಗಳು ಸೇರಿ ಸಮರ್ಪಿಸಿದರು. ಅರಮನೆ ಮಂಡಳಿ ಫಲತಾಂಬೂಲ ನೀಡಿ ಕ್ಯಾಪ್ಟನ್ ಅಭಿಮನ್ಯುವನ್ನು ಅರಮನೆಗೆ ಬರಮಾಡಿಕೊಂಡಿತು.
ಮೈಸೂರು, ಅಕ್ಟೋಬರ್ 05: ದಸರಾ ಜಂಬೂಸವಾರಿಯಲ್ಲಿ ನಿಶಾನೆ ಆನೆಯಾಗಿ ಭಾಗಿಯಾಗಲಿರುವ ಅಭಿಮನ್ಯು ಅರಮನೆ ಪ್ರವೇಶಿಸಿದ್ದು, ಜಯಮಾರ್ತಾಂಡ ದ್ವಾರದಲ್ಲಿ ಆನೆಗೆ ಪೂಜೆ ಸಲ್ಲಿಕೆ ಮಾಡಲಾಗಿದೆ. ಗಂಧದಗುಡಿ ಫೌಂಡೇಶನ್ ಮತ್ತು ಅಭಿಮನ್ಯು ಅಭಿಮಾನಿಗಳಿಂದ ಬೃಹತ್ ಮೋಸಂಬಿ ಹಾರ, 10 ಕೆಜಿ ತೂಕದ ಬೃಹತ್ ಪೇಟ ನೀಡಲಾಗಿದ್ದರೆ, ಫಲತಾಂಬೂಲ ನೀಡಿ ಅರಮನೆ ಮಂಡಳಿ ಆನೆಯನ್ನು ಬರಮಾಡಿಕೊಂಡಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
Loading...
Unable to load recommendations.
Follow Us
