ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು; ವಿಡಿಯೋ ಮಿಸ್ ಮಾಡಬೇಡಿ

Updated on: Dec 22, 2024 | 4:04 PM

ಛತ್ತೀಸ್‌ಗಢದ ರಾಯಗಢದಲ್ಲಿ ಟ್ರಾಫಿಕ್​ನಿಂದ ತುಂಬಿದ್ದ ರಸ್ತೆಯಲ್ಲಿ ಕರುವೊಂದು ಬಿದ್ದಿತ್ತು. ಆ ಕರುವಿನ ಮೇಲೆ ಕಾರು ಹರಿದು ಹೋಯಿತು. ಆ ಕರುವನ್ನು ಕಾಪಾಡಲು ಬಂದ ಹಸುಗಳು ಕಾರನ್ನು ಅಡ್ಡ ಹಾಕಿವೆ. ಬಳಿಕ ಅಕ್ಕಪಕ್ಕದಲ್ಲಿ ಸೇರಿದ ಜನರು ಕಾರಿನಡಿ ಸಿಲುಕಿದ್ದ ಕರುವನ್ನು ಹೊರಗೆ ಎಳೆದು, ಅದನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಈ ದೃಶ್ಯ ಅಂಗಡಿಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ರಾಯಗಢ: ಪುಟ್ಟ ಕರುವನ್ನು 200 ಮೀಟರ್‌ಗಳಷ್ಟು ಎಳೆದಿರುವ ವಿಡಿಯೋವನ್ನು ಹಲವಾರು ಇಂಟರ್ನೆಟ್ ಬಳಕೆದಾರರು ಆನ್‌ಲೈನ್‌ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಛತ್ತೀಸ್‌ಗಢದ ರಾಯಗಢದ ರಸ್ತೆಯೊಂದರಲ್ಲಿ ಕರು ಕಾರಿನ ಕೆಳಗೆ ಸಿಲುಕಿರುವುದನ್ನು ನೋಡಬಹುದು. ಆ ವೇಳೆ ಕೆಲವು ಹಸುಗಳು ಕಾರನ್ನು ಅಡ್ಡಹಾಕಿ, ಕರುವನ್ನು ರಕ್ಷಿಸಲು ಬಂದಿವೆ. ಆಗ ಕಾರು ಚಾಲಕ ಕಾರನ್ನು ನಿಲ್ಲಿಸಿದ್ದಾನೆ. ಬಳಿಕ ಅಲ್ಲಿ ಸೇರಿದ ಜನರು ಆ ಕರುವನ್ನು ರಕ್ಷಿಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us
ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More