ಚಿಕ್ಕಮಗಳೂರು, ಸೆ.1: ಪೆಟ್ರೋಲ್ ಹಾಕಿಸುವ ವಿಚಾರವಾಗಿ ಪೆಟ್ರೋಲ್ ಬಂಕ್ ಸಿಬ್ಬಂದಿಯನ್ನು ಕಾರು ಚಾಲಕ ಕ್ರಿಕೆಟ್ ಬ್ಯಾಟ್ನಿಂದ ಅಟ್ಟಾಡಿಸಿ ಹೊಡೆದ ಘಟನೆ ಚಿಕ್ಕಮಗಳೂರು (Chikkamagaluru) ಜಿಲ್ಲೆಯ ಮೂಡಿಗೆರೆ ತಾಲೂಕಿನ ಜನ್ನಪುರ ಗ್ರಾಮದಲ್ಲಿ ನಡೆದಿದೆ. ನಯರಾ ಪೆಟ್ರೋಲ್ ಬಂಕ್ನ ಮ್ಯಾನೇಜರ್ ಸೇರಿದಂತೆ ನಾಲ್ವರ ಮೇಲೆ ಹಲ್ಲೆ ನಡೆಸಲಾಗಿದೆ. ಹಲ್ಲೆ ನಡೆಸುತ್ತಿರುವ ದೃಶ್ಯವನ್ನ ಸ್ಥಳೀಯರು ಮೊಬೈಲ್ನಲ್ಲಿ ಸೆರೆಹಿಡಿದಿದ್ದಾರೆ. ಪ್ರಕರಣ ಸಂಬಂದ ಕಾರು ಚಾಲಕ ಮಧುಹುರುಡಿ ವಿರುದ್ಧ ಗೋಣಿಬೀಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
Published On - 7:48 pm, Fri, 1 September 23