ಪ್ರಜ್ವಲ್ ಅನರ್ಹಕ್ಕೆ ಕಾರಣಗಳೇನು; ದೂರುದಾರ ವಕೀಲ ದೇವರಾಜೇಗೌಡ ಹೇಳಿದ್ದಿಷ್ಟು
ಚನ್ನಾಂಬಿಕ ಕಲ್ಯಾಣ ಮಂಟಪವನ್ನು ಅವರಣ್ಣನ ಜತೆ ಪಾಲುದಾರಿಕೆ ಅಂತ ತೋರಿಸದೆ. ಅದರಲ್ಲಿ ಹಣ ಹೂಡಿಕೆ ಮಾಡಿದ್ದೇನೆ ಅಂತ ತೋರಿಸಿದ್ದರು. 14.66 ಲಕ್ಷ ಹೂಡಿಕೆ ಅಂತ ತೋರಿಸಿದ್ದರು. ಸ್ಥಿರಾಸ್ತಿಯನ್ನು ಮುಚ್ಚಿಟ್ಟು ಚರಾಸ್ತಿಯಾಗಿ ಆಸ್ತಿ ಮೊತ್ತ ತೋರಿಸಿರಲಿಲ್ಲ. ಈ ರೀತಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಕರಾರು ಸಲ್ಲಿಕೆ ಆಗಿತ್ತು.
ಬೆಂಗಳೂರು, ಸೆ.01: ಸಂಸದ ಸ್ಥಾನದಿಂದ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ಹೈಕೋರ್ಟ್ ಅನರ್ಹಗೊಳಿಸಿದೆ. ಹೌದು, ಚುನಾವಣಾ ಪ್ರಮಾಣಪತ್ರದಲ್ಲಿ ತಪ್ಪು ಮಾಹಿತಿ ನೀಡಿದ ಆರೋಪದ ಮೇಲೆ ಪ್ರಜ್ವಲ್ ಆಯ್ಕೆ ಪ್ರಶ್ನಿಸಿ ಚುನಾವಣಾ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಎ.ಮಂಜು, ದೇವರಾಜೇಗೌಡ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ಮಾತನಾಡಿದ ವಕೀಲ ‘ಪ್ರಜ್ವಲ್ ರೇವಣ್ಣ ಮೊದಲ ಬಾರಿಗೆ ಐಟಿ ರಿಟರ್ನ್ಸ್ ಫೈಲ್ ಮಾಡಿದ್ದು 2018 ರಲ್ಲಿ. ಆಗ ಅವರ ಒಟ್ಟು ಆದಾಯ 16.59 ಲಕ್ಷ ಇತ್ತು. ಅದೇ ನಂತರದ ವರ್ಷ ಚುನಾವಣೆಗೆ ನಿಲ್ಲುವಾಗ ಅವರ ಸಾಲವೇ 3.72 ಕೋಟಿ ಅಷ್ಟಾಗಿತ್ತು!
ಚನ್ನಾಂಬಿಕ ಕಲ್ಯಾಣ ಮಂಟಪವನ್ನು ಅವರಣ್ಣನ ಜತೆ ಪಾಲುದಾರಿಕೆ ಅಂತ ತೋರಿಸದೆ. ಅದರಲ್ಲಿ ಹಣ ಹೂಡಿಕೆ ಮಾಡಿದ್ದೇನೆ ಅಂತ ತೋರಿಸಿದ್ದರು. 14.66 ಲಕ್ಷ ಹೂಡಿಕೆ ಅಂತ ತೋರಿಸಿದ್ದರು. ಸ್ಥಿರಾಸ್ತಿಯನ್ನು ಮುಚ್ಚಿಟ್ಟು ಚರಾಸ್ತಿಯಾಗಿ ಆಸ್ತಿ ಮೊತ್ತ ತೋರಿಸಿರಲಿಲ್ಲ. ಈ ರೀತಿ ತಪ್ಪು ಮಾಹಿತಿ ನೀಡಿದ್ದಾರೆ ಎಂದು ತಕರಾರು ಸಲ್ಲಿಕೆ ಆಗಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ