ಮಳೆ-ಬೆಳೆ ಇಲ್ಲದೇ ಕಂಗಾಲು: ಚಿಕ್ಕಮಗಳೂರು ಜಿಲ್ಲೆಯಲ್ಲಿ ಮತ್ತೋರ್ವ ರೈತ ಆತ್ಮಹತ್ಯೆ
ಮಳೆ, ಬೆಳೆ ಇಲ್ಲದೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ರೈತನೋರ್ವ ನಿನ್ನೆ(ಆಗಸ್ಟ್ 31) ಆತ್ಮಹತ್ಯೆ ಮಾಡಿಕೊಂಡಿದ್ದ. ಇದಾದ 24 ಗಂಟೆಗಳಲ್ಲಿ ಮತ್ತೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದರೊಂದಿಗೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಎರಡು ದಿನದಲ್ಲಿ ಇಬ್ಬರು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಚಿಕ್ಕಮಗಳೂರು, (ಸೆಪ್ಟೆಂಬರ್ 01): ನಿಗದಿತ ಸಮಯಕ್ಕೆ ಮಳೆ ಬಾರದಿದ್ದರಿಂದ ರೈತರು(Farmer) ಕಂಗಾಲಾಗಿದ್ದಾರೆ. ಅದರಂತೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ (Chikkamagaluru) ತಲೆದೋರಿದ ಬರಗಾಲಕ್ಕೆ ಮತ್ತೋರ್ವ ಅನ್ನದಾತ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಅಜ್ಜಂಪುರ ತಾಲೂಕಿನ ಚಿಕ್ಕನಲ್ಲೂರಿನಲ್ಲಿ ಪರಮೇಶ್ವರಪ್ಪ(52) ಆತ್ಮಹತ್ಯೆ ಶರಣಾದ ರೈತ. ಮಳೆ ಇಲ್ಲದೆ ಬೆಳೆ ಸಂಪೂರ್ಣ ನಾಶವಾದ ಹಿನ್ನೆಲೆಯಲ್ಲಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಮೂರು ಎಕರೆ ಜಮೀನಿನಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದ್ದರಿಂದ ಮನೆಯಲ್ಲೇ ನೇಣುಬಿಗಿದುಕೊಂಡು ರೈತ ಪರಮೇಶ್ವರಪ್ಪ ಮನೆಯಲ್ಲೇ ನೇಣುಬಿಗಿದುಕೊಂಡು ಪ್ರಾಣಕಳೆದುಕೊಂಡಿದ್ದಾರೆ.
ಬ್ಯಾಂಕ್ ಸೇರಿದಂತೆ ಒಟ್ಟು 5 ಲಕ್ಷ ಸಾಲ ಮಾಡಿಕೊಂಡಿದ್ದ, ಈಗ ಮಳೆ ಇಲ್ಲದೇ ಈರುಳ್ಳಿ ಬೆಳೆ ಸಂಪೂರ್ಣ ನಾಶವಾಗಿದೆ. ಇದರಿಂದ ಪರಮೇಶ್ವರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಚಿಕ್ಕಮಗಳೂರು: ಬರಗಾಲಕ್ಕೆ ಮೊದಲ ಬಲಿ, ಬೆಳೆ ನಾಶದಿಂದ ಕಂಗೆಟ್ಟ ರೈತ ಆತ್ಮಹತ್ಯೆ
ಮಳೆಯಿಲ್ಲದೆ ಈರುಳ್ಳಿ ಬೆಳೆ ನಾಶಗೊಂಡ ಹಿನ್ನೆಲೆಯಲ್ಲಿ ನಿನ್ನೆ (ಆಗಸ್ಟ್ 31) ಕಡೂರು ತಾಲೂಕಿನ ಗಿರಿಯಾಪುರ ಗ್ರಾಮದಲ್ಲಿ 49 ವರ್ಷದ ಸತೀಶ್ ಎನ್ನುವ ರೈತ ಆತ್ಮಹತ್ಯೆ ಮಾಡಿಕೊಂಡಿದ್ದ. ಮಳೆ ನಿರೀಕ್ಷೆಯಲ್ಲಿದ್ದ ಗಿರಿಯಾಪುರ ಗ್ರಾಮದ ರೈತ ಸತೀಶ್ ಎಂಬವರು ಸಾಲ ಮಾಡಿ ತನ್ನ ಎರಡು ಎಕರೆ ಜಮೀನಿನಲ್ಲಿ ಈರುಳ್ಳಿ ಬೆಳೆ ಬಿತ್ತನೆ ಮಾಡಿದ್ದರು. ಆದರೆ ಮಳೆ ಬಾರದ ಹಿನ್ನೆಲೆ ಉಂಟಾದ ಬರಕ್ಕೆ ಈರುಳ್ಳಿ ಬೆಳೆ ಸಂಪೂರ್ಣವಾಗಿ ಒಣಗಿ ಹೋಗಿತ್ತು. ಇದರಿಂದ ತನ್ನ ಹೊಲದಲ್ಲೇ ನೇಣಿಗೆ ಶರಣಾಗಿದ್ದ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ