ಮೂರ್ಛೆಯಿಂದಾಗಿ ಚಿಂತಾಜನಕ ಸ್ಥಿತಿಯಲ್ಲಿದ್ದ 9 ತಿಂಗಳ ಬಾಲಕಿ ಜೊತೆ ಆಂಬ್ಯುಲೆನ್ಸ್‌ನಲ್ಲಿ 120 ಕಿಮೀ ಪ್ರಯಾಣಿಸಿ, ಹೆಚ್ಚಿನ ಚಿಕಿತ್ಸೆ ಕೊಡಿಸಿದ ಯುವ ವೈದ್ಯ!
Chikkamagaluru: ಚಿಕ್ಕಮಗಳೂರು ಜಿಲ್ಲೆಯ ಬಣಕಲ್‌ನಲ್ಲಿರುವ ಆರೋಗ್ಯ ಕೇಂದ್ರದಲ್ಲಿ ಒಂಬತ್ತು ತಿಂಗಳ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಬಾಲಕಿಗೆ 120 ಕಿ.ಮೀ ದೂರದಲ್ಲಿರುವ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತುರ್ತಾಗಿ ಚಿಕಿತ್ಸೆ ಕೊಡಿಸುವಂತಾಗಲು ಯುವ ವೈದ್ಯರೊಬ್ಬರು ಶ್ರಮಿಸಿದ್ದಾರೆ. ಆ ವೈದ್ಯರು ಬಾಲಕಿಯನ್ನು ಆಂಬ್ಯುಲೆನ್ಸ್‌ನಲ್ಲಿ ದೂರದ ಆಸ್ಪತ್ರೆಗೆ ಜೊತೆಯಲ್ಲಿ ಕರೆದುಕೊಂಡು ಹೋಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬಣಕಲ್‌ನಲ್ಲಿರುವ ( Banakal, Chikkamagaluru) ಆರೋಗ್ಯ ಕೇಂದ್ರದಲ್ಲಿ (Sai Krishna Health Centre) ಒಂಬತ್ತು ತಿಂಗಳ ಬಾಲಕಿಯ (infant girl) ಸ್ಥಿತಿ ಚಿಂತಾಜನಕವಾಗಿದ್ದು, ಬಾಲಕಿಗೆ 120 ಕಿ.ಮೀ ದೂರದಲ್ಲಿರುವ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (speciality hospital) ಚಿಕಿತ್ಸೆ ಕೊಡಿಸುವಂತಾಗಲು ವೈದ್ಯರೊಬ್ಬರು (doctor) ಶ್ರಮಿಸಿದ್ದಾರೆ. ಆ ವೈದ್ಯರು ಬಾಲಕಿಯನ್ನು ಆಂಬ್ಯುಲೆನ್ಸ್‌ನಲ್ಲಿ (ambulance) ಜೊತೆಗೆ ಕರೆದುಕೊಂಡು ಹೋಗಿದ್ದಾರೆ. ಬಣಕಲ್ ನಿವಾಸಿಯಾದ ಈ ಬಾಲಕಿಗೆ ಮೂರ್ಛೆ (seizures) ಕಾಣಿಸಿಕೊಂಡಿದ್ದು, ತಕ್ಷಣವೇ ಬಣಕಲ್‌ನಲ್ಲಿರುವ ಸಾಯಿಕೃಷ್ಣ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿತ್ತು. ಆಕೆಯ ಸ್ಥಿತಿಯ ತೀವ್ರತೆಯನ್ನು ಮನಗಂಡ ಅಲ್ಲಿನ ವೈದ್ಯಕೀಯ ತಂಡವು ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ಉನ್ನತ ಸೌಲಭ್ಯದ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಿದೆ.
ಬಣಕಲ್‌ನ ಸಾಯಿಕೃಷ್ಣ ಆರೋಗ್ಯ ಕೇಂದ್ರವು ಬೆಳ್ತಂಗಡಿ ತಾಲೂಕಿನ ಕಕ್ಕಿಂಜೆಯ ಶ್ರೀ ಕೃಷ್ಣ ಆಸ್ಪತ್ರೆಯೊಂದಿಗೆ ಸಂಯೋಜಿತವಾಗಿದೆ. ಈ ಹಿನ್ನೆಲೆಯಲ್ಲಿ ಬಣಕಲ್ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ಮದನ್‌ಕುಮಾರ್ ಜಿ ಅವರು ಶ್ರೀಕೃಷ್ಣ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಮುರಳಿಕೃಷ್ಣ ಇರವತ್ರಾಯ ಅವರೊಂದಿಗೆ ಸಮನ್ವಯ ಸಾಧಿಸಿ, ಸಮಾಲೋಚನೆ ನಡೆಸಿದ ನಂತರ, ಹೆಚ್ಚಿನ ವೈದ್ಯಕೀಯ ಆರೈಕೆಗಾಗಿ ಶಿಶುವನ್ನು ಮಂಗಳೂರಿಗೆ ವರ್ಗಾಯಿಸಲು ನಿರ್ಧರಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ವೈದ್ಯ ಮದನ್‌ಕುಮಾರ್ ಅವರು ಪಾಲಕರು ಸುಮಾರು ಏಳು ದಿನಗಳ ಹಿಂದೆ ಶಿಶುವನ್ನು ಚಿಕಿತ್ಸೆಗಾಗಿ ಕರೆತಂದಿದ್ದರು. ಅವಳು ಶೀತ ಮತ್ತು ಜ್ವರದಿಂದ ಬಳಲುತ್ತಿದ್ದಳು, ಬೇರೆ ಯಾವುದೇ ಆರೋಗ್ಯ ಸಮಸ್ಯೆಗಳು ಇರಲಿಲ್ಲ, ನಾಲ್ಕು ದಿನಗಳ ಕಾಲ ನೀಡಿದ್ದ ಚಿಕಿತ್ಸೆಯಿಂದ ಅವಳು ಚೆನ್ನಾಗಿದ್ದಳು, ಆದರೆ ಒಂದು ವಾರದ ನಂತರ ಅವಳು ಆರೋಗ್ಯ ಸಮಸ್ಯೆ ಎದುರಿಸತೊಡಗಿದಳು. ಬುಧವಾರ ಪೋಷಕರು ನನಗೆ ಕರೆ ಮಾಡಿ ಸಂಜೆ 5 ಗಂಟೆಗೆ ಮಗಳಿಗೆ ಮೂರ್ಛೆ ಬಂದಿದೆ ಎಂದು ಹೇಳಿದರು. ನಾನು ಮಗುವನ್ನು ಆಸ್ಪತ್ರೆಗೆ ಸೇರಿಸಲು ಸೂಚಿಸಿದೆ, ರಾತ್ರಿ 11 ಗಂಟೆಯಲ್ಲಿ ಮಗುವನ್ನು ಎರಡನೇ ಬಾರಿಗೆ ನಮ್ಮ ಆಸ್ಪತ್ರೆಗೆ ಕರೆತರಲಾಯಿತು. ಮಗು ಎರಡನೆಯ ಬಾರಿಗೆ ಮೂರ್ಛೆ ರೋಗದಿಂದ ಬಳಲಿದ್ದಳು. ಅದರಿಂದ ತಕ್ಷಣ ನಾವು ಮಗುವಿಗೆ ರಕ್ತ ಪರೀಕ್ಷೆ ಮಾಡಲಾಗಿ, ತೀವ್ರ ಸೋಂಕಿನಿಂದ ಬಳಲುತ್ತಿರುವುದು ಪತ್ತೆಯಾಯಿತು. ಹಾಗಾಗಿ ನಾವು ಡಾ.ಕೃಷ್ಣ ಮತ್ತು ಮುಕ್ಕಾದ ಶ್ರೀನಿವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್ ಸೆಂಟರ್‌ನ ಡಾ ಜಯಪ್ರಕಾಶ್ ಅವರ ಜೊತೆ ಮಗುವಿನ ದೇಹಸ್ಥಿತಿಯ ಬಗ್ಗೆ ಚರ್ಚಿಸಿದೆವು. ಬಾಲಕಿಗೆ ತಕ್ಷಣ ಮಕ್ಕಳ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಅಗತ್ಯವಿದ್ದ ಕಾರಣ ಶ್ರೀನಿವಾಸ್ ಆಸ್ಪತ್ರೆಗೆ ಸ್ಥಳಾಂತರಿಸಲು ನಿರ್ಧರಿಸಲಾಯಿತು ಎಂದು ತಿಳಿಸಿದ್ರು.
ಬಣಕಲ್ ಆಸ್ಪತ್ರೆಯಲ್ಲಿ ಮತ್ತೊಬ್ಬ ವೈದ್ಯರು ರಾತ್ರಿ ಕರ್ತವ್ಯದಲ್ಲಿದ್ದ ಕಾರಣ ಬಾಲಕಿಯ ಸ್ಥಿತಿ ಗಂಭೀರವಾಗಿರುವುದನ್ನು ಪರಿಗಣಿಸಿ, ನಾನೇ ಮಗುವಿನೊಂದಿಗೆ ಹೋಗಲು ನಿರ್ಧರಿಸಿದೆ. ಅಗತ್ಯ ಔಷಧಗಳೊಂದಿಗೆ ನಾನು ಆಂಬ್ಯುಲೆನ್ಸ್ ಹತ್ತಿದೆ, ಅದೃಷ್ಟವಶಾತ್ ಮಂಗಳೂರು ಆಸ್ಪತ್ರೆ ವರೆಗಿನ ಪ್ರಯಾಣವು ಸುಗಮವಾಗಿತ್ತು, ನಾವು 12 ಗಂಟೆಗೆ ಶ್ರೀ ಕೃಷ್ಣ ಆಸ್ಪತ್ರೆಗೆ ಹೋದೆವು, ಅಲ್ಲಿ ಮಗುವನ್ನು ಉತ್ತಮ ಸೌಕರ್ಯಗಳ ಆಂಬ್ಯುಲೆನ್ಸಿಗೆ ಸ್ಥಳಾಂತರಿಸಲಾಯಿತು. ಮಂಗಳೂರಿಗೆ ಹೊರಡುವ ಮುನ್ನ ಡಾ.ಕೃಷ್ಣ ಅವರೂ ಒಮ್ಮೆ ಬಾಲಕಿಯ ತಪಾಸಣೆ ನಡೆಸಿದರು ಎಂದು ಡಾ. ಮದನ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ರೋಗಿಯು ಪ್ರಜ್ಞಾಹೀನಳಾಗಿದ್ದು, ಆಕೆಯನ್ನು ಪರೀಕ್ಷಿಸಿ ಅಗತ್ಯ ಔಷಧಗಳನ್ನು ನೀಡಿದ ನಂತರ ಆಕೆಯನ್ನು ಅತ್ಯಾಧುನಿಕ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ವೈದ್ಯರು ಸ್ವಯಂಸೇವಕರಾಗಿ ತಡರಾತ್ರಿ ಆಂಬ್ಯುಲೆನ್ಸ್‌ನಲ್ಲಿ ರೋಗಿಯನ್ನು ಕರೆದುಕೊಂಡು ಹೋಗುವುದು ಅಪರೂಪದ ಪ್ರಕರಣವಾಗಿದೆ. ರೋಗಿಯನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಿ ಹಿಂತಿರುಗಿದಾಗ ಸಮಯ ಸುಮಾರು 7.40 ಆಗಿತ್ತು, ಈ ಯುವ ವೈದ್ಯರ ಬದ್ಧತೆ ಶ್ಲಾಘನೀಯ ಮತ್ತು ಮೆಚ್ಚುಗೆಗೆ ಅರ್ಹವಾಗಿದೆ, ”ಎಂದು ಡಾ. ಕೃಷ್ಣ ಅವರು ಹೇಳಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ