ಸಂಕಟ ಬಂದಾಗ ಮೈಮೇಲೆ ದೇವರನ್ನು ಅವತರಿಸಿಕೊಳ್ಳುವ ಚಿಕ್ಕಮಗಳೂರಿನ ಲಲಿತಮ್ಮನಂತಿರಬೇಕು ಸರ್ಕಾರೀ ಶಾಲಾ ಶಿಕ್ಷಕರು!
ಅನ್ನ ನೀರಿಲ್ಲದೆ 30 ವರ್ಷಗಳಿಂದ ಹೊರಗಡೆ ಕೂರಿಸಿದ್ದಾರೆ, ನನಗೆ ದೇವಸ್ಥಾನ ಬೇಕು, ಅದನ್ನು ಕಟ್ಟಿ ಶಾಲೆ ನಡೆಸಿ. ಇಲ್ಲದಿದ್ದರೆ, ಯಾರನ್ನೂ ಬಿಡಲ್ಲ, 9 ಜನರನ್ನು ಬಲಿ ಪಡೆಯುತ್ತೇನೆ ಅಂತ ಅವರು ಹೇಳುತ್ತಾರೆ. ಇವರನ್ನು ನೋಡುತ್ತಿದ್ದರೆ ಶಾಲಾಮಕ್ಕಳ ಭವಿಷ್ಯ ಎಂಥವರ ಕೈಯಲ್ಲಿದೆಯೆಲ್ಲ ಅಂತ ಹೇವರಿಕೆ ಹುಟ್ಟುತ್ತದೆ. ಈ ತಾಯಿ ಲಲಿತಮ್ಮ ಹೆಡ್ ಮಿಸ್ಟ್ರೆಸ್ ಬೇರೆ! ಅವರ ವಿರುದ್ಧ ಇಲಾಖೆ ಮತ್ತು ಆಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೊಡಬೇಕು
ಚಿಕ್ಕಮಗಳೂರು: ಪ್ರಾಯಶಃ ನಿಮಗೆ ನೆನಪಿರಬಹುದು. ಕೊರೋನಾ ಸೋಂಕನ್ನು ತಡೆಗಟ್ಟಲು ದೇಶದೆಲ್ಲೆಡೆ ಲಸಿಕಾ ಆಭಿಯಾನ (vaccination campaign) ನಡೆಯುತ್ತಿದ್ದಾಗ ಕಲ್ಯಾಣ ಕರ್ನಾಟಕದ ಕೆಲವು ಕಡೆ ಲಸಿಕೆ ಚುಚ್ಚಿಸಿಕೊಳ್ಳಲು ಹೆದರುತ್ತಿದ್ದ ಮಹಿಳೆಯರು ಅದರಿಂದ ತಪ್ಪಿಸಿಕೊಳ್ಳಲು ಮೈಮೇಲೆ ದೇವರು ಬಂದಂತೆ ಆಡುತ್ತಿದ್ದರು. ಆದರೆ ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬೆಟ್ಟಗೆರೆ ಗ್ರಾಮದ (Bettagere village) ಸರ್ಕಾರಿ ಪ್ರೌಢಶಾಲೆಯಲ್ಲಿ ಲಸಿಕಾ ಅಭಿಯಾನವೇನೂ ನಡೆಯತ್ತಿಲ್ಲ. ಶಾಲೆಯ ಮುಖ್ಯೋಪಾಧ್ಯಾಯನಿಯಾಗಿರುವ ಲಲಿತಮ್ಮ (headmistress Lalithamma) ಮೈಮೇಲೆ ಬಂದಂತೆ ಅಸಂಬಧ್ಧವಾಗಿ ಮಾತಾಡುತ್ತಿರುವುದು ಯಾಕೆ ಗೊತ್ತಾ? ಶಾಲೆಯ ಆಡಳಿತಾತ್ಮಕ ವಿಷಯಕ್ಕೆ ಸಂಬಂಧಿಸಿದಂತೆ ಅಕ್ರಮ ನಡೆದಿರುವ ಬಗ್ಗೆ ದೂರು ದಾಖಲಾಗಿದ್ದು ಅದನ್ನು ವಿಚಾರಿಸಲು ಕ್ಷೇತ್ರ ಶಿಕ್ಷಣಾಧಿಕಾರಿ (BEO) ಶಾಲೆಗೆ ಬಂದಿದ್ದಾರೆ. ಇನ್ನು ಸಿಕ್ಕಿಬೀಳುವುದು ಗ್ಯಾರಂಟಿ, ಶಿಸ್ತುಕ್ರಮ ನಿಶ್ಚಿತ ಅಂತ ಮನವರಿಕೆಯಾದ ಕೂಡಲೇ ಅವರು ಈ ನಾಟಕ ಶುರುವಿಟ್ಟುಕೊಂಡಿದ್ದಾರೆ! ಅನ್ನ ನೀರಿಲ್ಲದೆ 30 ವರ್ಷಗಳಿಂದ ಹೊರಗಡೆ ಕೂರಿಸಿದ್ದಾರೆ, ನನಗೆ ದೇವಸ್ಥಾನ ಬೇಕು, ಅದನ್ನು ಕಟ್ಟಿ ಶಾಲೆ ನಡೆಸಿ. ಇಲ್ಲದಿದ್ದರೆ, ಯಾರನ್ನೂ ಬಿಡಲ್ಲ, 9 ಜನರನ್ನು ಬಲಿ ಪಡೆಯುತ್ತೇನೆ ಅಂತ ಅವರು ಹೇಳುತ್ತಾರೆ. ಇವರನ್ನು ನೋಡುತ್ತಿದ್ದರೆ ಶಾಲಾಮಕ್ಕಳ ಭವಿಷ್ಯ ಎಂಥವರ ಕೈಯಲ್ಲಿದೆಯೆಲ್ಲ ಅಂತ ಹೇವರಿಕೆ ಹುಟ್ಟುತ್ತದೆ. ಈ ತಾಯಿ ಲಲಿತಮ್ಮ ಹೆಡ್ ಮಿಸ್ಟ್ರೆಸ್ ಬೇರೆ! ಅವರ ವಿರುದ್ಧ ಇಲಾಖೆ ಮತ್ತು ಆಧಿಕಾರಿಗಳು ಯಾವ ಕ್ರಮ ತೆಗೆದುಕೊಳ್ಳುತ್ತಾರೋ ಕಾದು ನೊಡಬೇಕು. ಕ್ರಮ ತೆಗೆದುಕೊಳ್ಳುತ್ತಾರೋ ಅಥವಾ ಹೆದರಿ ಸುಮ್ಮನಾಗುತ್ತಾರೋ ಎಂಬ ಕುತೂಹಲವೂ ಇದೆ!
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಾಜ್ಯದಲ್ಲಿ ಸದ್ಯಕ್ಕೆ ಯಾವ ಕುರ್ಚಿಯೂ ಖಾಲಿ ಇಲ್ಲ: ಪ್ರಿಯಾಂಕ್ ಖರ್ಗೆ

ಕರ್ನಾಟಕ ಬಂದ್ಗೆ ಸ್ಟಾರ್ ನಟರ ಬೆಂಬಲ ಉಂಟಾ? ಸಾರಾ ಗೋವಿಂದು ಪ್ರತಿಕ್ರಿಯೆ

KSRTC ಬಸ್ ಮುಂದೆ ಡೆಲಿವರಿ ಬಾಯ್ ರ್ಯಾಷ್ ಡ್ರೈವ್: ದಾರಿ ಬಿಡದೆ ಹುಚ್ಚಾಟ

ನಮ್ಮನ್ನು ಕೆಣಕಿದವರ ಇತಿಹಾಸ ತೆರೆದಿಡುತ್ತೇವೆ: ವಾಟಾಳ್ ನಾಗರಾಜ್
