ಕಾಂಗ್ರೆಸ್ ಪಕ್ಷದ ಸುಮಾರು 45 ಪ್ರಮುಖ ನಾಯಕರು ಬಿಎಲ್ ಸಂತೋಷ್ ಸಂಪರ್ಕದಲ್ಲಿದ್ದಾರೆ: ಬಿಜೆಪಿ ವಕ್ತಾರ

ಕಾಂಗ್ರೆಸ್ ಪಕ್ಷದ ಸುಮಾರು 45 ಪ್ರಮುಖ ನಾಯಕರು ಬಿಎಲ್ ಸಂತೋಷ್ ಸಂಪರ್ಕದಲ್ಲಿದ್ದಾರೆ: ಬಿಜೆಪಿ ವಕ್ತಾರ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 31, 2023 | 6:02 PM

ಇವತ್ತಿನ ಸಭೆಗೆ ಹಾಜರಾಗಲು ಎಲ್ಲ ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಚುನಾವಣೆಯಲ್ಲಿ ಸೋತವರಿಗೆ ಆಹ್ವಾನ ಕಳಿಸಲಾಗಿತ್ತು, ಅನಿವಾರ್ಯ ಕಾರಣಗಳಿಂದ ಹಾಜರಾಗುವುದು ಸಾಧ್ಯವಾಗುತ್ತಿಲ್ಲ ಅಂತ ಕೆಲ ನಾಯಕರು ತಿಳಿಸಿದ್ದಾರೆ ಎಂದು ಮಹೇಶ್ ಹೇಳಿದರು.

ಬೆಂಗಳೂರು: ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಇಂದು ನಗರದ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಪಕ್ಷದ ವಕ್ತಾರ ಎಂಜಿ ಮಹೇಶ್ (MG Mahesh) ಇವತ್ತಿನ ಸಭೆಗೆ ಹಾಜರಾಗಲು ಎಲ್ಲ ಬಿಜೆಪಿ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು ಮತ್ತು ಚುನಾವಣೆಯಲ್ಲಿ ಸೋತವರಿಗೆ ಆಹ್ವಾನ ಕಳಿಸಲಾಗಿತ್ತು, ಅನಿವಾರ್ಯ ಕಾರಣಗಳಿಂದ ಹಾಜರಾಗುವುದು ಸಾಧ್ಯವಾಗುತ್ತಿಲ್ಲ ಅಂತ ಕೆಲ ನಾಯಕರು ತಿಳಿಸಿದ್ದಾರೆ ಎಂದು ಹೇಳಿದರು. ಆಪರೇಶನ್ ಹಸ್ತದ ಬಗ್ಗೆಯೂ ಮಾತಾಡಿದ ಮಹೇಶ್ ಅದೆಲ್ಲ ಸುಳ್ಳು ಮತ್ತು ಕಾಂಗ್ರೆಸ್ (Congress party) ಪಕ್ಷದ ಕೇವಲ ಬೆದರಿಕೆ ತಂತ್ರ, ಬಿಜೆಪಿಯಿಂದ ಯಾರೂ ಕಾಂಗ್ರೆಸ್ ಗೆ ಹೋಗುತ್ತಿಲ್ಲ ಎಂದು ಹೇಳಿದರು. ಅದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಸುಮಾರು 45 ಪ್ರಮುಖ ನಾಯಕರು ತಮ್ಮನ್ನು ಸಂಪರ್ಕದಲ್ಲಿದ್ದಾರೆ ಎಂದು ಸಭೆಯಲ್ಲಿ ಸಂತೋಷ್ ತಿಳಿಸಿದರೆಂದು ಮಹೇಶ್ ಹೇಳಿದರು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳ ವಿರುದ್ಧ ಸೆಪ್ಟೆಂಬರ್ 8 ರಂದು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದೆ ಎಂದು ಮಹೇಶ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ