ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ ಸೇರೋದು ನಿಜ, ಯಾವಾಗ ಅಂತ ಖಚಿತವಾಗಿ ಹೇಳಲಾಗದು: ಜಗದೀಶ್ ಶೆಟ್ಟರ್, ಪರಿಷತ್ ಸದಸ್ಯ
ಪಕ್ಷಾಂತರದ ಬಗ್ಗೆ ಎರಡೂ ಪಕ್ಷಗಳ ಪ್ರಮುಖರು ತದ್ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವತ್ತು ಬೆಂಗಳೂರಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ಕಾಂಗ್ರೆಸ್ ಪಕ್ಷದ ಸುಮಾರು 45 ಪ್ರಮುಖ ತಮ್ಮ ಸಂಪರ್ಕದಲ್ಲಿದ್ದಾರೆಂದು ಸಭೆಯಲ್ಲಿ ಹೇಳಿದ್ದಾರಂತೆ.
ಧಾರವಾಡ: ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಕಾಂಗ್ರೆಸ್ ಪಕ್ಷದ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar), ಬಿಜೆಪಿಯಿಂದ ಕೆಲ ನಾಯಕರು ಕಾಂಗ್ರೆಸ್ ಸೇರಲಿರುವುದನ್ನು ಖಚಿತಪಡಿಸಿದರು. ಯಾರ್ಯರು ಬರುತ್ತಾರೆ, ಯಾವಾಗ ಬರುತ್ತಾರೆ ಅಂತ ಈಗಲೇ ಹೇಳಲಾಗದು ಯಾಕೆಂದರೆ ಇದು ಒಂದು ದಿನದಲ್ಲಿ ಮಗಿಯುವ ಪ್ರಕ್ರಿಯೆ ಅಲ್ಲ ಎಂದು ಶೆಟ್ಟರ್ ಹೇಳಿದರು. ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಿರುವ ನಿರ್ಧಾರವನ್ನು ಹಿರಿಯ ನಾಯಕರು (senior leaders) ಪ್ರಕಟಿಸುತ್ತಾರೆ ಎಂದು ವಿಧಾನ ಸಭಾ ಚುನಾವಣೆಗೆ ಮೊದಲು ಕಾಂಗ್ರೆಸ್ ಸೇರಿ ಆ ಪಕ್ಷದ ಟಿಕೆಟ್ ನಿಂದ ಸ್ಪರ್ಧಿಸಿ ಸೋತರೂ ನಂತರ ವಿಧಾನ ಪರಿಷತ್ ಸದಸ್ಯನಾಗಿರುವ ಶೆಟ್ಟರ್ ಹೇಳಿದರು. ಪಕ್ಷಾಂತರದ ಬಗ್ಗೆ ಎರಡೂ ಪಕ್ಷಗಳ ಪ್ರಮುಖರು ತದ್ವಿರುದ್ಧವಾದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇವತ್ತು ಬೆಂಗಳೂರಲ್ಲಿ ಬಿಜೆಪಿ ನಾಯಕರ ಸಭೆ ನಡೆಸಿದ ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ (BL Santosh) ಕಾಂಗ್ರೆಸ್ ಪಕ್ಷದ ಸುಮಾರು 45 ಪ್ರಮುಖ ತಮ್ಮ ಸಂಪರ್ಕದಲ್ಲಿದ್ದಾರೆಂದು ಸಭೆಯಲ್ಲಿ ಹೇಳಿದ್ದಾರಂತೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ