ನೆಲಮಂಗಲ: ಮಳೆಗಾಗಿ ಮಳೆರಾಯನ ಮೂರ್ತಿ ಮೇಲೆ ನೀರು ಸುರಿಸಿಕೊಂಡು ಪ್ರಾರ್ಥನೆ, ವಿಡಿಯೋ ವೈರಲ್​

ನೆಲಮಂಗಲ: ಮಳೆಗಾಗಿ ಮಳೆರಾಯನ ಮೂರ್ತಿ ಮೇಲೆ ನೀರು ಸುರಿಸಿಕೊಂಡು ಪ್ರಾರ್ಥನೆ, ವಿಡಿಯೋ ವೈರಲ್​

ಬಿ ಮೂರ್ತಿ, ನೆಲಮಂಗಲ
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 31, 2023 | 4:18 PM

ಈಗಾಗಲೇ ಬರ ತಾಲ್ಲೂಕುಗಳನ್ನು ಸರ್ಕಾರದಿಂದ ಪಟ್ಟಿ ಮಾಡಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಾದ್ಯಂತ ಮಳೆಯಾಗದೇ ರೈತರು ಕಂಗಾಲಾಗಿದ್ದಾರೆ. ಈ ಹಿನ್ನಲೆ ನೆಲಮಂಗಲ ತಾಲ್ಲೂಕನ್ನು ಕೂಡ ಬರದ ಪಟ್ಟಿಯಲ್ಲಿ ಸೇರಿಸಿ, ಸರ್ಕಾರದಿಂದ ಸಿಗುವ ಎಲ್ಲಾ ಪರಿಹಾರ, ಸಹಕಾರ ದೊರೆಯುವಂತೆ ಮಾಡುವೆ ಎಂದು ನೆಲಮಂಗಲ ಶಾಸಕ ಶ್ರೀನಿವಾಸ್ ಹೇಳಿದ್ದಾರೆ.

ಬೆಂಗಳೂರು ಗ್ರಾಮಾಂತರ, ಆ.31: ಹಲವಾರು ದಿನಗಳಿಂದ ಮಳೆ ಬಾರದ ಹಿನ್ನಲೆ ಗ್ರಾಮಸ್ಥರೆಲ್ಲರೂ ಸೇರಿ ಮಳೆಗಾಗಿ ಮಳೆರಾಯನ ಮೂರ್ತಿ ಪೂಜೆ ಮೊರೆಹೋಗಿದ್ದಾರೆ. ಈಗಾಗಲೇ ರೈತರು(Farmer) ಬೆಳೆದ ಬೆಳೆಗೆ ಮಳೆಯ ಅವಶ್ಯಕತೆ ಇದೆ. ಹಾಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ (Nelamangala) ತಾಲೂಕಿನ ಗೊಲ್ಲಹಳ್ಳಿಯಲ್ಲಿ ಮಳೆಗಾಗಿ ಮೂರ್ತಿ ಮಾಡಿ, ಗ್ರಾಮದ ಮನೆ ಮನೆಗೆ ತೆರಳಿ ಮಳೆರಾಯನ ಮೂರ್ತಿ ಮೇಲೆ ನೀರು ಸುರಿಸಿಕೊಂಡು ಪೂಜೆ ಮಾಡಿ, ಹುಯ್ಯೋ ಹುಯ್ಯೋ ಮಳೆರಾಯ,ಹೂವಿನ ತೋಟಕ್ಕೆ ನೀರಿಲ್ಲ, ಬಾರಪ್ಪೋ ಮಳೆರಾಯ, ಮಳೆ ಕುರಿತು ಹಾಡುಗಳನ್ನು ಹಾಡಿಕೊಂಡು ಪ್ರತಿ ಮನೆಯಲ್ಲೂ ಮಳೆರಾಯನಿಗಾಗಿ ಪೂಜೆ ಮಾಡಿ ಪ್ರಾರ್ಥನೆ ಮಾಡುತ್ತಿದ್ದಾರೆ.

ಇದೇ ವಿಷಯಕ್ಕೆ ನೆಲಮಂಗಲ ಶಾಸಕ ಶ್ರೀನಿವಾಸ್ ಪ್ರತಿಕ್ರಿಯೆ ನೀಡಿದ್ದು, ‘ಈಗಾಗಲೇ ಬರ ತಾಲ್ಲೂಕುಗಳನ್ನು ಸರ್ಕಾರದಿಂದ ಪಟ್ಟಿ ಮಾಡಲಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲ್ಲೂಕಿನಾದ್ಯಂತ ಮಳೆಯಾಗದೇ ರೈತರು ಕಂಗಾಲಾಗಿದ್ದಾರೆ. ಈ ಹಿನ್ನಲೆ ನೆಲಮಂಗಲ ತಾಲ್ಲೂಕನ್ನು ಕೂಡ ಬರದ ಪಟ್ಟಿಯಲ್ಲಿ ಸೇರಿಸಿ, ಸರ್ಕಾರದಿಂದ ಸಿಗುವ ಎಲ್ಲಾ ಪರಿಹಾರ, ಸಹಕಾರ ದೊರೆಯುವಂತೆ ಮಾಡುವೆ ಎಂದಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ