ಮೈಸೂರಿನಲ್ಲಿ ಪಾದಚಾರಿಗಳ ಮೇಲೆ ನುಗ್ಗಿದ ಕಾರು! ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ಕಾರನ್ನು ಪಾರ್ಕಿಂಗ್ ಮಾಡುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಕಾರು ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ಹತ್ತಿ ನಿಂತಿದ್ದವರಿಗೆ ಗುದ್ದಿದೆ.
ಮೈಸೂರು: ಜಿಲ್ಲೆಯಲ್ಲಿ ಪಾದಚಾರಿಗಳ ಮೇಲೆ ಕಾರೊಂದು ನುಗ್ಗಿದೆ. ಕಾರು ನುಗ್ಗಿದ ಪರಿಣಾಮ ಪಾದಚಾರಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೈಸೂರಿನ ಅರಸು ರಸ್ತೆಯಲ್ಲಿ ಇಬ್ಬರ ಮೇಲೆ ಏಕಾಏಕಿ ಕಾರು ನುಗ್ಗಿದ್ದು, ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಪಾದಚಾರಿಗಳು ಪುಟ್ ಪಾತ್ ಮೇಲೆ ನಿಂತಿದ್ದರು. ಕಾರನ್ನು ಪಾರ್ಕಿಂಗ್ ಮಾಡುವ ವೇಳೆ ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಕಾರು ನಿಯಂತ್ರಣ ತಪ್ಪಿ ಪುಟ್ ಪಾತ್ ಮೇಲೆ ಹತ್ತಿ ನಿಂತಿದ್ದವರಿಗೆ ಗುದ್ದಿದೆ. ಈ ಘಟನೆ ನವೆಂಬರ್ 13ಕ್ಕೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅದೃಷ್ಟವಶಾತ್ ಪಾದಚಾರಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಸದ್ಯ ಈ ಪ್ರಕರಣ ಮೈಸೂರು ನಗರ ದೇವರಾಜ ಸಂಚಾರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.