ಕೂದಲೆಳೆ ಅಂತರದಲ್ಲಿ ಉಳಿಯಿತು ಜೀವ, ದೇವ್ರೆ ಅಂತಾ ನಿಟ್ಟುಸಿರು ಬಿಟ್ಟ ಯುವತಿ: ಇಲ್ಲಿದೆ ಭಯಾನಕ ವಿಡಿಯೋ

ಕೂದಲೆಳೆ ಅಂತರದಲ್ಲಿ ಉಳಿಯಿತು ಜೀವ, ದೇವ್ರೆ ಅಂತಾ ನಿಟ್ಟುಸಿರು ಬಿಟ್ಟ ಯುವತಿ: ಇಲ್ಲಿದೆ ಭಯಾನಕ ವಿಡಿಯೋ

Jagadisha B
| Updated By: Rakesh Nayak Manchi

Updated on: Aug 29, 2023 | 5:40 PM

ಬೆಂಗಳೂರು ನಗರದ ಬಿಟಿಎಂ ಲೇಔಟ್‌ನಲ್ಲಿ ಅಂಗಡಿಯೊಂದರ ಮುಂದೆ ಇಟ್ಟಿದ್ದ ವಸ್ತುಗಳಿಗೆ ಕಾರೊಂದು ಢಿಕ್ಕಿ ಹೊಡೆದು ಹೋದ ಘಟನೆ ನಡೆದಿದೆ. ಘಟನೆ ವೇಳೆ ಯುವತಿಯೊಬ್ಬಳು ಕೂದಲೆಳೆ ಅಂತದಿಂದ ಬಚಾವ್ ಆಗಿದ್ದಾಳೆ. ಆಗಸ್ಟ್ 29 ರಂದು ಬೆಳಗ್ಗೆ 10:42ಕ್ಕೆ ನಡೆದ ಘಟನೆ ಇದಾಗಿದ್ದು, ಇದರ ದೃಶ್ಯಾವಳಿ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಬೆಂಗಳೂರು, ಆಗಸ್ಟ್ 29: ಕೂದಲೆಳೆ ಅಂತರದಲ್ಲಿ ಉಳಿಯಿತು ಜೀವ, ದೇವ್ರೆ ಅಂತಾ ಯುವತಿಯೊಬ್ಬಳು ನಿಟ್ಟುಸಿರು ಬಿಟ್ಟಿದ್ದಾಳೆ. ಅಷ್ಟಕ್ಕೂ ಆಗಿದ್ದೇನು ಅಂದರೆ, ಯುವತಿಯೊಬ್ಬಳು ಅಂಗಡಿ ಮುಂದೆ ನಿಂತು ಸಾಮಾಗ್ರಿ ಖರೀದಿಯಲ್ಲಿ ತೊಡಗಿದ್ದಳು. ಈ ವೇಳೆ ಅಂಗಡಿ ಮುಂದೆ ಇಟ್ಟಿದ್ದ ವಸ್ತುಗಳಿಗೆ ಕಾರು ಡಿಕ್ಕಿ (Accident) ಹೊಡೆದಿದೆ. ಈ ವೇಳೆ ಅಲ್ಲೇ ಇದ್ದ ಯುವತಿ ಕೂದಲೆಳೆ ಅಂತರದಿಂದ ಪಾರಾಗಿದ್ದಾಳೆ. ಏಕಾಏಕಿಯಾಗಿ ಕಾರು ತನ್ನ ಬಳಿ ನುಗ್ಗಿದಾಗ ಭೀತಿಗೊಂಡ ಯುವತಿ ತನ್ನ ಜೀವ ಉಳಿಯಿತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾಳೆ. ಅಷ್ಟಕ್ಕೂ ಈ ಘಟನೆ ಬೆಂಗಳೂರು ನಗರದ ಬಿಟಿಎಂ ಲೇಔಟ್‌ನಲ್ಲಿ ನಡೆದಿದ್ದು, ಇದರ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ಸ್ಟೋರಿಗಳನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ