ಬಿಜೆಪಿ ನಾಯಕರು ಚಾರ್ಜ್​ಶೀಟ್ ತಯಾರು ಮಾಡೋದನ್ನು ಬಿಟ್ಟು ಪಕ್ಷಕ್ಕೆ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಲಿ: ಜಗದೀಶ್ ಶೆಟ್ಟರ್

ಬಿಜೆಪಿ ನಾಯಕರು ಚಾರ್ಜ್​ಶೀಟ್ ತಯಾರು ಮಾಡೋದನ್ನು ಬಿಟ್ಟು ಪಕ್ಷಕ್ಕೆ ಅಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕನನ್ನು ಆರಿಸಿಕೊಳ್ಳಲಿ: ಜಗದೀಶ್ ಶೆಟ್ಟರ್

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 29, 2023 | 4:50 PM

ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಹೇರಳವಾಗಿ ಆಶೀರ್ವದಿಸಿರುವುದರಿಂದ ಸರ್ಕಾರ ಭದ್ರವಾಗಿದೆ. ಬಿಜೆಪಿ ನಾಯಕರು ತಾವು ಕ್ರಿಯಾಶೀಲರಾಗಿದ್ದೇವೆ ಅಂತ ತೋರಿಸಿಕೊಳ್ಳಲು ಇಂಥವನ್ನೆಲ್ಲ ಮಾಡುತ್ತಿದ್ದಾರೆ. ಅವರು ಕೆಲಸ ಮಾಡಲೇಬೇಕು ಅಂತಾದ್ರೆ, ಒಬ್ಬು ವಿರೋಧ ಪಕ್ಷದ ನಾಯಕನನ್ನು ಅಯ್ಕೆ ಮಾಡಿಕೊಳ್ಳಲಿ, ಪಕ್ಷದ ರಾಜ್ಯ ಘಟಕಕ್ಕೆ ಒಬ್ಬ ಅಧ್ಯಕ್ಷನನ್ನು ಆರಿಸಿಕೊಳ್ಳಲಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ (Siddaramaiah government) ಅಧಿಕಾರದಲ್ಲಿ 100 ದಿನಗಳನ್ನು ಪೂರೈಸುತ್ತಿದ್ದಂತೆಯೇ ರಾಜ್ಯ ಬಿಜೆಪಿ ಘಟಕ ಅದರ ವಿರುದ್ಧ ಚಾರ್ಜ್ ಶೀಟೊಂದನ್ನು ಬಿಡುಗಡೆ ಮಾಡಿದೆ. ಈ ಸಂಗತಿಯನ್ನು ಇಂದು ಬೆಂಗಳೂರಲ್ಲಿ ಕಾಂಗ್ರೆಸ್ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ (Jagadish Shettar) ಗಮನಕ್ಕೆ ತಂದಾಗ, ಅವರಿಗೆ ಮಾಡಲು ಕೆಲಸವಿಲ್ಲ ಎಂದು ಕುಹುಕವಾಡಿದರು. ರಾಜ್ಯದ ಜನತೆ ಕಾಂಗ್ರೆಸ್ ಪಕ್ಷವನ್ನು ಹೇರಳವಾಗಿ ಆಶೀರ್ವದಿಸಿರುವುದರಿಂದ ಸರ್ಕಾರ ಭದ್ರವಾಗಿದೆ. ಬಿಜೆಪಿ ನಾಯಕರು ತಾವು ಕ್ರಿಯಾಶೀಲರಾಗಿದ್ದೇವೆ ಅಂತ ತೋರಿಸಿಕೊಳ್ಳಲು ಇಂಥವನ್ನೆಲ್ಲ ಮಾಡುತ್ತಿದ್ದಾರೆ. ಅವರು ಕೆಲಸ ಮಾಡಲೇಬೇಕು ಅಂತಾದ್ರೆ, ಒಬ್ಬು ವಿರೋಧ ಪಕ್ಷದ ನಾಯಕನನ್ನು (Leader of Opposition) ಅಯ್ಕೆ ಮಾಡಿಕೊಳ್ಳಲಿ, ಪಕ್ಷದ ರಾಜ್ಯ ಘಟಕಕ್ಕೆ ಒಬ್ಬ ಅಧ್ಯಕ್ಷನನ್ನು ಆರಿಸಿಕೊಳ್ಳಲಿ, ಪಕ್ಷದ ಹಲವಾರು ಶಾಸಕರು, ನಾಯಕರು ಪಕ್ಷ ತೊರೆಯುವ ಯೋಚನೆಯಲ್ಲಿದ್ದಾರೆ, ಅವರನ್ನು ಹಿಡಿದಿಟ್ಟಿಕೊಳ್ಳುವ ಪ್ರಯತ್ನ ಮಾಡಲಿ ಎಂದು ಜಗದೀಶ್ ಶೆಟ್ಟರ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ