ಮಂಗಳೂರು: ಜಿಲ್ಲಾಧಿಕಾರಿಗಳ ಕಚೇರಿ ನಿರ್ಮಾಣಕ್ಕೆ ನಿಗದಿತ ಮೊತ್ತಕ್ಕಿಂತ ಹೆಚ್ಚು ಖರ್ಚು ಮಾಡಿರುವ ಅಧಿಕಾರಿಗಳನ್ನು ಸಚಿವ ಕೃಷ್ಣ ಭೈರೇಗೌಡ ತರಾಟೆಗೆ ತೆಗೆದುಕೊಂಡರು!
ಮನ ಬಂದಂತೆ ಹಣ ಖರ್ಚು ಮಾಡಲು ಅದು ಯಾರ ಮನೆ ದುಡ್ಡು? ನಿಮ್ಮ ಮನೇದಾ ಇಲ್ಲ ನನ್ನ ಮನೇದಾ ಅಂತ ಅವರು ಮಂಗಳೂರು ನಗರ ಪಾಲಿಕೆಯ ಇಂಜಿನಿಯರಿಂಗ್ ಸಲಹೆಗಾರ ಧರ್ಮರಾಜ್ಗೆ ಕೋಪದಲ್ಲಿ ಕೇಳಿತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೇ ನಾವು ಹೇಳುತ್ತಿರೋದು. ಸಿದ್ದರಾಮಯ್ಯ ಸರ್ಕಾರ ದುಂದುವೆಚ್ಚ, ಕಾಮಗಾರಿಗಳ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ವೆಚ್ಚ ಮಾಡುವುದನ್ನು ನಿಲ್ಲಿಸಬೇಕಿದೆ.
ಮಂಗಳೂರು: ಸಿದ್ದರಾಮಯ್ಯ ಸರ್ಕಾರದ ಎಲ್ಲ ಮಂತ್ರಿಗಳು ಮತ್ತು ಶಾಸಕರು ಕಂದಾಯ ಸಚಿವ ಕೃಷ್ಣ ಬೈರೇಗೌಡ (Krishna Byre Gowda) ಅವರ ಮೈಂಡ್ಸೆಟ್ನೊಂದಿಗೆ ಕೆಲಸ ಮಾಡುವ ಅವಶ್ಯಕತೆಯಿದೆ ಮಾರಾಯ್ರೇ. ನಗರದ ಪಡೀಲ್ ನಲ್ಲಿ ಕಳೆದ 5 ವರ್ಷಗಳಿಂದ ನಿರ್ಮಾಣ ಹಂತದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಇಂದು ಭೇಟಿ ನೀಡಿದ ಸಚಿವರು; ಕಾಮಗಾರಿ ಆಮೆಗತಿಯಲ್ಲಿ (snail’s pace) ಸಾಗುತ್ತಿರುವುದಕ್ಕೆ ಮತ್ತು ನಿರ್ಮಾಣ ಕಾರ್ಯಕ್ಕೆ ನಿಗದಿತ ಮೊತ್ತಕ್ಕಿಂತ (stipulated budget) ಹೆಚ್ಚು ವೆಚ್ಚ ಮಾಡಿರುವುದಕ್ಕೆ ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಮೇಲೆ ಕಿಡಿಕಾರಿದರು. ಮನ ಬಂದಂತೆ ಹಣ ಖರ್ಚು ಮಾಡಲು ಅದು ಯಾರ ಮನೆ ದುಡ್ಡು? ನಿಮ್ಮ ಮನೇದಾ ಇಲ್ಲ ನನ್ನ ಮನೇದಾ ಅಂತ ಅವರು ಮಂಗಳೂರು ನಗರ ಪಾಲಿಕೆಯ ಇಂಜಿನಿಯರಿಂಗ್ ಸಲಹೆಗಾರ ಧರ್ಮರಾಜ್ ಗೆ (Dharmaraj) ಕೋಪದಲ್ಲಿ ಕೇಳಿತ್ತಿರುವುದನ್ನು ವಿಡಿಯೋದಲ್ಲಿ ನೋಡಬಹುದು. ಇದನ್ನೇ ನಾವು ಹೇಳುತ್ತಿರೋದು. ಸಿದ್ದರಾಮಯ್ಯ ಸರ್ಕಾರ ದುಂದುವೆಚ್ಚ, ಕಾಮಗಾರಿಗಳ ಮೇಲೆ ಅಗತ್ಯಕ್ಕಿಂತ ಹೆಚ್ಚಿನ ವೆಚ್ಚ ಮಾಡುವುದನ್ನು ನಿಲ್ಲಿಸಬೇಕಿದೆ. ಈ ವರ್ಷ ಕೊರತೆ ಮಳೆಯಿಂದ ಬರಗಾಲ ಕೂಡ ಘೋಷಣೆಯಾಗಲಿರುವುದರಿಂದ ವೆಚ್ಚಗಳ ಮೇಲೆ ಹಿಡಿತ ಸಾಧಿಸುವ ಜರೂರತ್ತಿದೆ.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್ ಯತ್ನಾಳ್

Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್ಪ್ರೆಸ್ ರೈಲು

IPL 2025: ಆಶಿಶ್ ನೆಹ್ರಾ ಆಕ್ರೋಶಕ್ಕೆ ಇದುವೇ ಅಸಲಿ ಕಾರಣ

ಹೋಟೆಲ್ನ ಕೊನೆಯ ಮಹಡಿಯ ಸ್ವಿಮ್ಮಿಂಗ್ ಪೂಲ್ನಲ್ಲಿ ಮಲಗಿದ್ದ ಜೋಡಿ
