ನಿರುದ್ಯೋಗಿಗಳಿಗೆ ಶುಭ ಸುದ್ದಿ, ಕೆಎಸ್ಆರ್ಟಿಸಿಯಲ್ಲಿ ಸುಮಾರು 13,000 ಖಾಲಿ ಹುದ್ದೆಗಳಿಗೆ ಭರ್ತಿ ಪ್ರಕ್ರಿಯೆ ನಡೆಯಲಿದೆ; ರಾಮಲಿಂಗಾರೆಡ್ಡಿ ಘೋಷಣೆ!
ಹೊಸ ಬಸ್ ಗಳು ಸೇರ್ಪಡೆಯಾಗುವ ವಿಷಯವನ್ನು ಈಗಾಗಲೇ ತಿಳಿಸಿರುವುದಾಗಿ ಎಂದ ಸಚಿವ, ವಾಹನಗಳೊಂದಿಗೆ ಸಿಬ್ಬಂದಿ ಸಂಖ್ಯೆ ಕೂಡ ಹೆಚ್ಚಲಿರುವುದರಿಂದ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಹೇಳಿದರು. ತಾವು ಹಿಂದೆ ಸಾರಿಗೆ ಸಚಿವನಾಗಿದ್ದಾಗ ಬಾಂಬೆ-ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದನ್ನು ಅವರು ಸ್ಮರಿಸಿದರು.
ಬೆಂಗಳೂರು: ಸಾರಿಗೆ ಸಚಿವ ರಾಮಲಿಂಗಾರೆಡ್ಡಿ (Ramalinga Reddy) ಮಂಗಳವಾರ ಬಾಗಲಕೋಟೆಯಲ್ಲಿದ್ದರು. ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದ ಸಚಿವ ನಿರುದ್ಯೋಗಿಗಳಿಗೆ (unemployed) ಒಂದು ಒಳ್ಳೆಯ ಸುದ್ದಿ ನೀಡಿದ್ದಾರೆ. ಅವರು ಹೇಳುವ ಪ್ರಕಾರ ಇತ್ತೀಚಿನ ಕೆಲ ವರ್ಷಗಳಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಸುಮಾರು 16,000 ಉದ್ಯೊಗಿಗಳು ನಿವೃತ್ತರಾದರೂ ತೆರವುಗೊಂಡ ಹುದ್ದೆಗಳಿಗೆ ನೇಮಕಾತಿಗಳು (recruitment) ನಡೆದಿಲ್ಲ. ಹಾಗಾಗಿ, ಅತಿ ಶೀಘ್ರದಲ್ಲಿ ಕಂಡಕ್ಟರ್, ಡ್ರೈವರ್ ಮತ್ತು ಮೆಕ್ಯಾನಿಕ್ ಮೊದಲಾದ ಹುದ್ದೆಗಳಿಗೆ 13,000 ಜನರನ್ನು ಭರ್ತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಲಾಗುವುದು, ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗಾಗಿ ಕಳಿಸಲಾಗಿದೆ ಎಂದು ಹೇಳಿದರು. ಹೊಸ ಬಸ್ ಗಳು ಸೇರ್ಪಡೆಯಾಗುವ ವಿಷಯವನ್ನು ಈಗಾಗಲೇ ತಿಳಿಸಿರುವುದಾಗಿ ಎಂದ ಸಚಿವ, ವಾಹನಗಳೊಂದಿಗೆ ಸಿಬ್ಬಂದಿ ಸಂಖ್ಯೆ ಕೂಡ ಹೆಚ್ಚಲಿರುವುದರಿಂದ ಸಮಸ್ಯೆಗಳು ಕಡಿಮೆಯಾಗಲಿವೆ ಎಂದು ಹೇಳಿದರು. ತಾವು ಹಿಂದೆ ಸಾರಿಗೆ ಸಚಿವನಾಗಿದ್ದಾಗ ಬಾಂಬೆ-ಕರ್ನಾಟಕ ಭಾಗಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದನ್ನು ಅವರು ಸ್ಮರಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ