Video: ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದ ವ್ಯಕ್ತಿ

Updated on: Jul 11, 2025 | 9:05 AM

ಸ್ಟಂಟ್, ರೀಲ್ಸ್​ ಎಲ್ಲವೂ ಓಕೆ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದಾಗ ಮಾತ್ರ. ಯಾವುದೋ ಹುಚ್ಚುತನ ಜೀವಕ್ಕೆ ಕುತ್ತುತರುವಂತಾಗಬಾರದು. ವ್ಯಕ್ತಿಯೊಬ್ಬ ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸಾಹಿಲ್ ಅನಿಲ್ ಜಾಧವ್ ಎಂಬುವವರು ಕಾರು ಚಲಾಯಿಸುತ್ತಿದ್ದರು. ಮಹಾರಾಷ್ಟ್ರದ ಕರಾಡ್‌ನ ಪಠಾಣ್-ಸದವಘಾಪುರ ರಸ್ತೆಯಲ್ಲಿರುವ ಪ್ರಸಿದ್ಧ ಟೇಬಲ್ ಪಾಯಿಂಟ್‌ನಲ್ಲಿ ಈ ಘಟನೆ ಸಂಭವಿಸಿದೆ.

ಮಹಾರಾಷ್ಟ್ರ, ಜುಲೈ 11: ಸ್ಟಂಟ್, ರೀಲ್ಸ್​ ಎಲ್ಲವೂ ಓಕೆ ನಿಮ್ಮ ಎಚ್ಚರಿಕೆಯಲ್ಲಿ ನೀವಿದ್ದಾಗ ಮಾತ್ರ. ಯಾವುದೋ ಹುಚ್ಚುತನ ಜೀವಕ್ಕೆ ಕುತ್ತುತರುವಂತಾಗಬಾರದು. ವ್ಯಕ್ತಿಯೊಬ್ಬ ಸ್ಟಂಟ್ ಮಾಡಲು ಹೋಗಿ ಕಾರಿನ ಸಮೇತ 300 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. ಸಾಹಿಲ್ ಅನಿಲ್ ಜಾಧವ್ ಎಂಬುವವರು ಕಾರು ಚಲಾಯಿಸುತ್ತಿದ್ದರು. ಮಹಾರಾಷ್ಟ್ರದ ಕರಾಡ್‌ನ ಪಠಾಣ್-ಸದವಘಾಪುರ ರಸ್ತೆಯಲ್ಲಿರುವ ಪ್ರಸಿದ್ಧ ಟೇಬಲ್ ಪಾಯಿಂಟ್‌ನಲ್ಲಿ ಈ ಘಟನೆ ಸಂಭವಿಸಿದೆ.

ಈ ವ್ಯಕ್ತಿ ಕಾರಿನಲ್ಲಿ ಸ್ಟಂಟ್ ಮಾಡಲು ಪ್ರಯತ್ನಿಸುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ಕಾರು ಅಂಚಿನಿಂದ ಜಾರಿ ಮಧ್ಯದಲ್ಲಿ ಸಿಲುಕಿಕೊಂಡಿದೆ. ಸಾಹಿಲ್ ಗಂಭೀರ ಗಾಯಗೊಂಡಿದ್ದು, ಈಗ ಸಹ್ಯಾದ್ರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳೀಯರು ಸುರಕ್ಷತಾ ಬೇಲಿಗಳು ಮತ್ತು ಎಚ್ಚರಿಕೆ ಫಲಕಗಳನ್ನು ತಕ್ಷಣವೇ ಅಳವಡಿಸಬೇಕೆಂದು ಒತ್ತಾಯಿಸಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ