Video: ನಾನು ಬರೋದು ಕಾಣ್ಸಿಲ್ವಾ, ಲಿಫ್ಟ್ ಬಾಗಿಲು ಹಾಕಿದ್ದೇಕೆಂದು ಗದರಿ ಬಾಲಕನ ಕೈ ಕಚ್ಚಿದ ವ್ಯಕ್ತಿ
ನಾನು ಬರೋದು ಕಾಣ್ಸಿಲ್ವಾ, ಲಿಫ್ಟ್(Lift) ಬಾಗಿಲು ಹಾಕಿದ್ದೇಕೆಂದು ಗದರಿ ವ್ಯಕ್ತಿಯೊಬ್ಬ ಬಾಲಕನಿಗೆ ಕಪಾಳಮೋಕ್ಷ ಮಾಡಿ, ಕೈ ಕಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಹಜವಾಗಿ ಲಿಫ್ಟ್ ಒಳಗೆ ಹೋಗುತ್ತಿದ್ದಂತೆ ಯಾವ ಫ್ಲೋರ್ ಎಂಬುದನ್ನು ಪ್ರೆಸ್ ಮಾಡಿ ಬಾಗಿಲು ಹಾಕಿಕೊಳ್ಳುವುದು ಸಾಮಾನ್ಯ. ಆ ಬಾಲಕ ಆ ವ್ಯಕ್ತಿ ಬರುತ್ತಿರುವುದನ್ನು ಗಮನಿಸಿದಂತೆ ವಿಡಿಯೋದಲ್ಲಿ ಕಾಣುತ್ತಿಲ್ಲ. ಕೇವಲ ಲಿಫ್ಟ್ ಬಾಗಿಲು ಹಾಕಿದ್ದಕ್ಕೆ ವಿಪರೀತ ಕೋಪಗೊಂಡ ವ್ಯಕ್ತಿ ಬಾಲಕನಿಗೆ ಹೊಡೆದಿದ್ದಷ್ಟೇ ಅಲ್ಲದೆ ಕೈಕಚ್ಚಿದ್ದಾನೆ.
ಮಹಾರಾಷ್ಟ್ರ, ಜುಲೈ 11: ನಾನು ಬರೋದು ಕಾಣ್ಸಿಲ್ವಾ, ಲಿಫ್ಟ್(Lift) ಬಾಗಿಲು ಹಾಕಿದ್ದೇಕೆಂದು ಗದರಿ ವ್ಯಕ್ತಿಯೊಬ್ಬ ಬಾಲಕನಿಗೆ ಕಪಾಳಮೋಕ್ಷ ಮಾಡಿ, ಕೈ ಕಚ್ಚಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಹಜವಾಗಿ ಲಿಫ್ಟ್ ಒಳಗೆ ಹೋಗುತ್ತಿದ್ದಂತೆ ಯಾವ ಫ್ಲೋರ್ ಎಂಬುದನ್ನು ಪ್ರೆಸ್ ಮಾಡಿ ಬಾಗಿಲು ಹಾಕಿಕೊಳ್ಳುವುದು ಸಾಮಾನ್ಯ. ಆ ಬಾಲಕ ಆ ವ್ಯಕ್ತಿ ಬರುತ್ತಿರುವುದನ್ನು ಗಮನಿಸಿದಂತೆ ವಿಡಿಯೋದಲ್ಲಿ ಕಾಣುತ್ತಿಲ್ಲ. ಕೇವಲ ಲಿಫ್ಟ್ ಬಾಗಿಲು ಹಾಕಿದ್ದಕ್ಕೆ ವಿಪರೀತ ಕೋಪಗೊಂಡ ವ್ಯಕ್ತಿ ಬಾಲಕನಿಗೆ ಹೊಡೆದಿದ್ದಷ್ಟೇ ಅಲ್ಲದೆ ಕೈಕಚ್ಚಿದ್ದಾನೆ.
ಪಾಲೆಗಾಂವ್ ಪ್ರದೇಶದ ಪಟೇಲ್ ಕ್ಸೆನಾನ್ ಹೌಸಿಂಗ್ ಪ್ರಾಜೆಕ್ಟ್ ನಲ್ಲಿ ಈ ಘಟನೆ ನಡೆದಿದೆ. ಸಿಸಿಟಿವಿ ದೃಶ್ಯಾವಳಿಯಲ್ಲಿ ಆ ವ್ಯಕ್ತಿ ಲಿಫ್ಟ್‌ಗೆ ಪ್ರವೇಶಿಸಿ ಹುಡುಗನಿಗೆ ಪದೇ ಪದೇ ಕಪಾಳಮೋಕ್ಷ ಮಾಡುತ್ತಿರುವುದು ಕಂಡುಬಂದಿದೆ. ಭದ್ರತಾ ಸಿಬ್ಬಂದಿ ಮತ್ತು ಇತರರು ಅವನನ್ನು ತಡೆಯಲು ಮುಂದಾದರೂ, ಆ ವ್ಯಕ್ತಿ ಲಾಬಿಯಲ್ಲಿ ಕೂಡ ಬಾಲಕನ ಮೇಲೆ ನಡೆಸಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಬಾಲಕ ಹೇಳಿದ್ದೇನು?
‘ನಾನು ಲಿಫ್ಟ್ನಲ್ಲಿ ಬರುತ್ತಿದ್ದೆ, ಅದು 9ನೇ ಮಹಡಿಯಲ್ಲಿ ನಿಂತಿತು, ಹೊರಗೆ ಯಾರೂ ಕಾಣಿಸಲಿಲ್ಲ, ಹಾಗಾಗಿ ನಾನು ಲಿಫ್ಟ್ ಮುಚ್ಚಿದ್ದೆ, ಆ ವ್ಯಕ್ತಿ ಒಳಗೆ ಬಂದು ಏಕಾಏಕಿ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ, ಯಾಕೆ ಹೊಡೆಯುತ್ತಿದ್ದೀರಿ ಎಂದು ಕೇಳಿದಾಗ ಕೈ ಕಚ್ಚಿದ್ದಷ್ಟೇ ಅಲ್ಲದೆ, ಹೊರಗೆ ಸಿಗು ನಿನ್ನ ಚಾಕುವಿನಿಂದ ಇರಿದು ಕೊಲೆ ಮಾಡುತ್ತೀನಿ ಎಂದು ಬೆದರಿಕೆ ಕೂಡ ಹಾಕಿದ್ದಾರೆ’’ ಎಂದು ಬಾಲಕ ತಿಳಿಸಿದ್ದಾನೆ. ಬಾಲಕನ ತಾಯಿ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಯುತ್ತಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್ಪೋರ್ಟ್ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!

