Video: ಆಕಾಶದಲ್ಲೇ ಕಳಚಿಬಿದ್ದ ಎಂಜಿನ್, 15 ಜನರ ಸಾವಿಗೆ ಕಾರಣವಾದ ಯುಎಸ್ ಕಾರ್ಗೋ ಜೆಟ್ ಅಪಘಾತದ ವಿಡಿಯೋ
ಅಮೆರಿಕದ ಕೆಂಟುಕಿಯ ಲೂಯಿಸ್ವಿಲ್ಲೆ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸರಕು ಸಾಗಣೆ ವಿಮಾನ ದುರಂತದ ವಿಡಿಯೋ ವೈರಲ್ ಆಗಿದೆ. ಭಯಾನಕ ವೀಡಿಯೊವನ್ನು ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಬಿಡುಗಡೆ ಮಾಡಿದೆ. ಹೊನೊಲುಲುಗೆ ತೆರಳಬೇಕಿದ್ದ ಮೆಕ್‌ಡೊನೆಲ್ ಡೌಗ್ಲಾಸ್ MD-11F ಮಾದರಿಯ ಯುಪಿಎಸ್ ಫ್ಲೈಟ್ 2976 ವಿಮಾನವು ರನ್‌ವೇನಿಂದ ಮೇಲೆದ್ದ ಕೆಲವೇ ಸೆಕೆಂಡುಗಳಲ್ಲಿ ಎಂಜಿನ್ ಗಾಳಿಯಲ್ಲಿ ಕಳಚಿಬಿದ್ದಿತ್ತು.
ಕೆಂಟುಕಿ, ಮೇ 20: ಅಮೆರಿಕದ ಕೆಂಟುಕಿಯ ಲೂಯಿಸ್ವಿಲ್ಲೆ ಮುಹಮ್ಮದ್ ಅಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಸರಕು ಸಾಗಣೆ ವಿಮಾನ ದುರಂತದ ವಿಡಿಯೋ ವೈರಲ್ ಆಗಿದೆ. ಭಯಾನಕ ವೀಡಿಯೊವನ್ನು ಯುಎಸ್ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ (NTSB) ಬಿಡುಗಡೆ ಮಾಡಿದೆ. ಹೊನೊಲುಲುಗೆ ತೆರಳಬೇಕಿದ್ದ ಮೆಕ್‌ಡೊನೆಲ್ ಡೌಗ್ಲಾಸ್ MD-11F ಮಾದರಿಯ ಯುಪಿಎಸ್ ಫ್ಲೈಟ್ 2976 ವಿಮಾನವು ರನ್‌ವೇನಿಂದ ಮೇಲೆದ್ದ ಕೆಲವೇ ಸೆಕೆಂಡುಗಳಲ್ಲಿ ಎಂಜಿನ್ ಗಾಳಿಯಲ್ಲಿ ಕಳಚಿಬಿದ್ದಿತ್ತು.
ಬ್ಲ್ಯಾಕ್ ಬಾಕ್ಸ್ ಮತ್ತು ಫ್ಲೈಟ್ ರೆಕಾರ್ಡರ್ ದತ್ತಾಂಶದ ಪ್ರಕಾರ, ಟೇಕ್‌ಆಫ್ ಆದ ತಕ್ಷಣ ಎಂಜಿನ್ ಹಿಂಸಾತ್ಮಕವಾಗಿ ಬೇರ್ಪಟ್ಟಿದ್ದರಿಂದ ವಿಮಾನಕ್ಕೆ ಅಗತ್ಯವಾದ ಎತ್ತರವನ್ನು ಪಡೆಯಲು ಸಾಧ್ಯವಾಗಲಿಲ್ಲ. ನಿಯಂತ್ರಣ ಕಳೆದುಕೊಳ್ಳುವ ಮುನ್ನ ವಿಮಾನವು ನೆಲದಿಂದ ಕೇವಲ 30 ಅಡಿ ಎತ್ತರಕ್ಕಷ್ಟೇ ಏರಿತ್ತು. ಆಕಾಶದಲ್ಲೇ ಬೆಂಕಿಯ ಉಂಡೆಯಾಗಿ ಮಾರ್ಪಟ್ಟ ಸರಕು ವಿಮಾನವು ವಿಮಾನ ನಿಲ್ದಾಣದ ಬಳಿಯಿದ್ದ ಕೈಗಾರಿಕಾ ಕಟ್ಟಡಗಳ ಮೇಲೆ ನೇರವಾಗಿ ಅಪ್ಪಳಿಸಿತು.
ಈ ಭೀಕರ ಘರ್ಷಣೆಯ ತೀವ್ರತೆಗೆ ವಿಮಾನ ನಿಲ್ದಾಣದ ಸುತ್ತಮುತ್ತಲಿನ ಅರ್ಧ ಮೈಲಿ ಪ್ರದೇಶದಾದ್ಯಂತ ಕೇವಲ ಅವಶೇಷಗಳ ರಾಶಿ ಮತ್ತು ವಿಮಾನದ ಇಂಧನದಿಂದ ಹೊತ್ತಿ ಉರಿದ ಭೀಕರ ಬೆಂಕಿಯ ಜ್ವಾಲೆ ಮಾತ್ರ ಕಾಣಿಸುತ್ತಿತ್ತು. ‘ನ್ಯೂಯಾರ್ಕ್ ಪೋಸ್ಟ್’ ವರದಿಯ ಪ್ರಕಾರ, ಈ ಭೀಕರ ಅಪಘಾತದಲ್ಲಿ ವಿಮಾನದಲ್ಲಿದ್ದ ಮೂವರು ಸಿಬ್ಬಂದಿ ಮತ್ತು ನೆಲದ ಮೇಲಿದ್ದ ಕನಿಷ್ಠ 12 ಕಾರ್ಮಿಕರು ಸೇರಿದಂತೆ ಒಟ್ಟು 15 ಜನರು ಸಜೀವದಹನವಾಗಿದ್ದರು. 2025ರ ನವೆಂಬರ್ನಲ್ಲಿ ಈ ಘಟನೆ ನಡೆದಿತ್ತು.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ