ಬೆಂಗಳೂರಿನ ಸಾಯಿ ಲೇಔಟ್​ನಲ್ಲಿ ಅರ್ಧಭಾಗದಷ್ಟು ಮುಳುಗಿದ ಕಾರುಗಳು, ಟ್ರ್ಯಾಕ್ಟರ್​ನಲ್ಲಿ ಬಂದ ಅಧಿಕಾರಿಗಳು

ಅರುಣ್​ ಕುಮಾರ್​ ಬೆಳ್ಳಿ

Updated on: May 19, 2025 | 12:32 PM

ಬಿಬಿಎಂಪಿಯ ಅಧಿಕಾರಿಗಳು ಸ್ಥಳ ಬಂದಿರೋದೇನೋ ನಿಜ, ಅದರೆ ಅವರು ಟ್ರ್ಯಾಕ್ಟರ್​ನಲ್ಲಿ ಬಂದಿದ್ದಾರೆ. ಒಬ್ಬ ಅಧಿಕಾರಿ ಟ್ರ್ಯಾಕ್ಟರ್​ನಲ್ಲಿ ಕುಳಿತು ಹೋಗುತ್ತಿರುವುದನ್ನು ದೃಶ್ಯಗಳಲ್ಲಿ ನೋಡಬಹದು. ಏರಿಯಾದ ಜನ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ, ಆದರೆ ಅದು ಅವರ ಮೇಲೆ ಯಾವುದೇ ಪ್ರಭಾವ ಬೀರದು! ಬೈಸಿಕೊಂಡು, ಉಗಿಸಿಕೊಂಡು ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ಅಭ್ಯಾಸವಾಗಿ ಹೋಗಿದೆ.

ಬೆಂಗಳೂರು, ಮೇ 19: ಬೆಂಗಳೂರು ಮಹಾನಗರದಲ್ಲಿ (Bengaluru city) ನಿನ್ನೆ ರಾತ್ರಿ ಸುರಿದ ಭಾರೀ ಮಳೆಯಿಂದ ಅಗಿರುವ ಅವಾಂತರಗಳನ್ನು ನಾವು ವರದಿ ಮಾಡುತ್ತಲೇ ಇದ್ದೇವೆ. ನಗರದ ಕೆಅರ್ ಪುರಂ ಕ್ಷೇತ್ರದಲ್ಲಿರುವ ಸಾಯಿ ಲೇಔಟ್ ಕತೆಯನ್ನು ಮೊನ್ನೆಯಷ್ಟೇ ಹೇಳಿದ್ದೆವು. ಅವತ್ತು ಸುರಿದಿದ್ದು ಅಂಥ ದೊಡ್ಡ ಮಳೆಯೇನಲ್ಲ, ಅದರೆ ನಿನ್ನೆ ರಾತ್ರಿಯಾಗಿದ್ದು ಮಾತ್ರ ಭಯಂಕರ ಮಳೆ. ಹಾಗಾಗೇ ಏರಿಯಾದ ಜನರ ಸಮಸ್ಯೆಗಳು ಇಮ್ಮಡಿಗೊಂಡಿವೆ. ಮನೆಗಳ ಮುಂದಿನ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಕಾರುಗಳ ಅರ್ಧಭಾಗ ಮುಳುಗಡೆಯಾಗಿದೆ. ಇಲ್ಲೊಂದು ಕಾರನ್ನು ಮೂವ್ ಮಾಡಲೂ ಆಗುತ್ತಿಲ್ಲ, 6-7 ಜನ ಸೇರಿ ತಳ್ಳುತ್ತಿದ್ದಾರೆ.

ಇದನ್ನೂ ಓದಿ:ಕೆಅರ್ ಪುರದ ಸಾಯಿ ಲೇಔಟ್​ನಲ್ಲಿ ಮನೆಗಳನ್ನು ಹೊಕ್ಕ ಮಳೆನೀರು, ರಸ್ತೆಗಳು ಹೊಂಡ, ಜನರ ಪರದಾಟ

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.