ರಸ್ತೆಯಲ್ಲೇ ರಾತ್ರಿ ಕಳೆದು ಬೆಳಗ್ಗೆ ಟ್ರಾಫಿಕ್ ಜಾಮ್ ಮಾಡ್ತಿದ್ದ ಜಾನುವಾರುಗಳು ಗೋಶಾಲೆಗೆ ಸ್ಥಳಾಂತರ
Goshala, Yadgir: ಯಾದಗಿರಿಯಲ್ಲಿ ವಾಹನ ಸವಾರರಿಗೆ ಅಡ್ಡಿಯಾಗಿದ್ದ, ರಸ್ತೆ ಮೇಲೆ ಓಡಾಡ್ತಿದ್ದ ಜಾನುವಾರಗಳ ಹಿಡಿದು ರಕ್ಷಣೆ ಮಾಡಿ ಸ್ಥಳಾಂತರ ಮಾಡಲಾಗಿದೆ. ನಗರಸಭೆ ಪೌರಾಯುಕ್ತ ಸಂಗಪ್ಪ ಉಫಾಸೆ ನೇತೃತ್ವದಲ್ಲಿ ಈ ಆಪರೇಷನ್ ಪುಣ್ಯಕೋಟಿ ನಡೆದಿದೆ. ಈ ಹಿಂದೆಯೇ ಜಾನುವಾರುಗಳನ್ನ ರಸ್ತೆ ಮೇಲೆ ಬಿಡದಂತೆ ಸೂಚನೆ ನೀಡಿದ್ರೂ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ನಗರಸಭೆ ಅಧಿಕಾರಿಗಳು ಪುಣ್ಯಕೋಟಿ ಹೆಸರಿನಲ್ಲಿ ಆಪರೇಷನ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಯಾದಗಿರಿ: ಜಾನುವಾರುಗಳು (Cattle) ರಸ್ತೆಗಳಲ್ಲಿ ಹಂಪ್ಗಳಾಗಿ ಟ್ರಾಫಿಕ್ ಜಾಮ್ (Traffic Jam) ಗೆ ತನ್ನ ಕೊಡುಗೆ ನೀಡುವುದು ಎಲ್ಲಾ ಊರುಗಳಲ್ಲಿಯೂ ಇದ್ದಿದ್ದೇ. ಆದರೆ ಇದು ಯಾದಗಿರಿಯಲ್ಲಿ ತುಸು ಜಾಸ್ತಿಯೇ ಇದೆ. ಹಾಗಾಗಿ ಯಾದಗಿರಿಯಲ್ಲಿ ತಡ ರಾತ್ರಿ ನಗರಸಭೆಯಿಂದ ಆಪರೇಷನ್ ಪುಣ್ಯಕೋಟಿ ನಡೆದಿದೆ. ವಾಹನ ಸವಾರರಿಗೆ ಅಕ್ಷರಶಃ ಅಡ್ಡಿಯಾಗಿದ್ದ, ರಸ್ತೆ ಮೇಲೆ ಓಡಾಡ್ತಿದ್ದ ಜಾನುವಾರಗಳನ್ನು ಹಿಡಿದು ರಕ್ಷಣೆ ಮಾಡಿ ಸ್ಥಳಾಂತರ ಮಾಡಲಾಗಿದೆ. ನಗರಸಭೆ ಪೌರಾಯುಕ್ತ ಸಂಗಪ್ಪ ಉಫಾಸೆ ನೇತೃತ್ವದಲ್ಲಿ ಈ ಆಪರೇಷನ್ ಪುಣ್ಯಕೋಟಿ ನಡೆದಿದೆ. ಈ ಹಿಂದೆಯೇ ಜಾನುವಾರುಗಳನ್ನ ರಸ್ತೆ ಮೇಲೆ ಬಿಡದಂತೆ ಸೂಚನೆ ನೀಡಿದ್ರೂ ಮಾಲೀಕರು ಎಚ್ಚೆತ್ತುಕೊಂಡಿರಲಿಲ್ಲ. ಹೀಗಾಗಿ ನಗರಸಭೆ ಅಧಿಕಾರಿಗಳು ಪುಣ್ಯಕೋಟಿ ಹೆಸರಿನಲ್ಲಿ ಆಪರೇಷನ್ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ (Goshala, Yadgir).
ಯಾದಗಿರಿ ನಗರದಲ್ಲಿ ಬಿಡಾಡಿ ದನಗಳ ಹಾವಳಿಯಿಂದ ವಾಹನ ಸವಾರರು ಸಂಕಷ್ಟ ಎದುರಿಸುವಂತಾಗಿತ್ತು. ರಸ್ತೆ ಮೇಲೆ ಜಾನುವಾರುಗಳ ಓಡಾಟದಿಂದ ರಸ್ತೆ ಅಪಘಾತಗಳು ಹೆಚ್ಚಾಗಿದ್ವು. ನಗರದ ಗಾಂಧಿ ವೃತ್ತ, ಎಪಿಎಂಸಿ ಪ್ರದೇಶ ಸೇರಿದಂತೆ ವಿವಿಧ ಪ್ರಮುಖ ರಸ್ತೆಯಲ್ಲಿಯೇ ಜಾನುವಾರುಗಳು ರಾತ್ರಿ ಕಳೆಯುತ್ತಿದ್ವು. ಸಾರ್ವಜನಿಕರ ಹಿತದೃಷ್ಟಿಯಿಂದ ಜಾನುವಾರುಗಳನ್ನು ರಕ್ಷಣೆ ಮಾಡಿ ಗೋ ಶಾಲೆಗೆ ಸ್ಥಳಾಂತರ ಮಾಡಲಾಗಿದೆ. ನಗರದಲ್ಲಿ ಓಡಾಡುತ್ತಿದ್ದ 15 ಗೋವುಗಳನ್ನ ರಕ್ಷಣೆ ಮಾಡಿ ಗೋಶಾಲೆಗೆ ಸ್ಥಳಾಂತರ ಮಾಡಲಾಗಿದೆ. ಗೋವುಗಳ ರಕ್ಷಣೆ ವೇಳೆ ಮಹಿಳೆಯೊಬ್ಬರು ಕಣ್ಣೀರು ಹಾಕಿದ ಪ್ರಸಂಗವೂ ನಡೆಯಿತು. ತನ್ನ ಹಸುವನ್ನ ನಗರಸಭೆ ವಾಹನದಲ್ಲಿ ಹಾಕಿದಾಗ ಮಹಿಳೆ ಕಣ್ಣೀರು ಹಾಕಿದರು.
ನಮ್ಮ ಪುಣ್ಯಕೋಟಿಯನ್ನು ಲಾರಿಯಲ್ಲಿ ಹಾಕಿಕೊಂಡು ಹೋದ್ರೆ ಹೇಗೆ? ನಮ್ಮ ಆಕಳನ್ನು ಬಿಟ್ಟುಬಿಡಿ, ನಿಮಗೆ ಪುಣ್ಯ ಬರುತ್ತದೆ, ಆಕುಳುಗಳಿಂದಲೇ ಜೀವನ ಸಾಗಿಸುತ್ತೇನೆ ಎಂದು ಕಣ್ಣೀರು ಹಾಕುತ್ತಲೇ ಲಾರಿ ಹತ್ತಿ ಕೆಲ ಹೊತ್ತು ಮಹಿಳೆ ಹೈಡ್ರಾಮಾ ಸೃಷ್ಟಿಸಿದರು.
ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ