Terror module busted: ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಐವರು ಶಂಕಿತ ಉಗ್ರರನ್ನು ವಶಕ್ಕೆ ಪಡೆದ ಸಿಸಿಬಿ

|

Updated on: Jul 19, 2023 | 1:32 PM

ಶಂಕಿತ ಉಗ್ರರಿಂದ 5 ಕಂಟ್ರಿ ಮೇಡ್ ಪಿಸ್ಟಲ್, 45 ಜೀವಂತ ಗುಂಡುಗಳು, ಒಂದು ವಾಕಿ ಟಾಕಿ, ಡ್ರಾಗರ್ ಮತ್ತು 12 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.

ಬೆಂಗಳೂರು: ನಗರದ ಕೆಲಭಾಗಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ಮಾಡಿದ್ದ 5 ಜನ ಶಂಕಿತ ಉಗ್ರರನ್ನು ಕೇಂದ್ರ ಅಪರಾಧ ವಿಭಾಗ ದಳದ (ಸಿಸಿಬಿ) ಅಧಿಕಾರಿಗಳು (CCB sleuths) ವಶಕ್ಕೆ ಪಡೆದಿದ್ದಾರೆ. ಸಿಸಿಬಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಪೊಲೀಸ್ ಕಾರ್ಯಾಚರಣೆಯ ವಿವರ ನೀಡಿದ ಬೆಂಗಳೂರು ಪೊಲೀಸ್ ಕಮೀಷನರ್ ಬಿ ದಯಾನಂದ (B Dayanand) ಆರೋಪಿಗಳು ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಮನೆಯೊಂದನ್ನು ಬಾಡಿಗೆ ಪಡೆದು ವಾಸವಾಗಿದ್ದರು ಎಂದು ಹೇಳಿದರು. 2008 ಬೆಂಗಳೂರಲ್ಲಿ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ ಭಾಗಿಯಾಗಿ ಈಗ ನಗರದ ಕೇಂದ್ರ ಕಾರಾಗೃಹದಲ್ಲಿರುವ ಡಿ ನಜೀರ್ (D Nazir) ಮತ್ತು 2017 ರಲ್ಲಿ ನಗರದ ಆರ್ ಟಿ ನಗರದಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಪ್ರಮುಖ ಆರೋಪಿಯಾಗಿ ತಲೆಮರೆಸಿಕೊಂಡು ವಿದೇಶದಲ್ಲಿ ವಾಸವಾಗಿರುವ ವ್ಯಕ್ತಿಯೊಬ್ಬ ಈ ಐವರು ಶಂಕಿತರನ್ನು ರ‍್ಯಾಡಿಕಲೈಸ್ ಮಾಡಿ ಸಂಚು ರೂಪಿಸಿದ್ದರು ಎಂದು ಆಯುಕ್ತರು ಹೇಳಿದರು. ಶಂಕಿತ ಉಗ್ರರಿಂದ 5 ಕಂಟ್ರಿ ಮೇಡ್ ಪಿಸ್ಟಲ್, 45 ಜೀವಂತ ಗುಂಡುಗಳು, ವಾಕಿ ಟಾಕಿ, ಡ್ರಾಗರ್ ಮತ್ತು 12 ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದರು.

ಮತ್ತಷ್ಟು ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 19, 2023 01:28 PM