ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ ಸಿಸಿಬಿ; ಅಧಿಕಾರಿಗಳಿಂದ ತೀವ್ರ ವಿಚಾರಣೆ
ಸಿಸಿಬಿ ಪೊಲೀಸರು, ಆದಿಲ್ ಅಲಿಯಾಸ್ ಜುಬಾನನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಕರೆ ತಂದು ವಿಚಾರಣೆ ಮಾಡುತ್ತಿದ್ದಾರೆ.
ಬೆಂಗಳೂರು: ಇಬ್ಬರು ಶಂಕಿತ ಉಗ್ರರನ್ನು (Terrorist) ನಿನ್ನೆ (ಜುಲೈ 25) ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಪೈಕಿ ಓರ್ವನನ್ನು ಬೆಂಗಳೂರಿನಲ್ಲಿ, ಮತ್ತೊಬ್ಬನನ್ನು ತಮಿಳುನಾಡಿನ ಸೇಲಂನಲ್ಲಿ ಅರೆಸ್ಟ್ ಮಾಡಲಾಗಿದೆ. ತಮಿಳುನಾಡಿನಲ್ಲಿ ಬಂಧನಕ್ಕೊಳಗಾಗಿರುವ ಶಂಕಿತ ಉಗ್ರ ಜುಬಾ, ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಈತನ ಬಗ್ಗೆ ಮಾಹಿತಿ ಪಡೆದಿದ್ದ ಬೆಂಗಳೂರು ಸಿಸಿಬಿ ಪೊಲೀಸರು ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಸುಮಾರು 12 ಗಂಟೆಗಳ ಕಾರ್ಯಾಚರಣೆ ನಡೆಸಿ ನಿನ್ನೆ ಮಧ್ಯಾಹ್ನ 3.30ರ ಸುಮಾರಿಗೆ ಶಂಕಿತ ಉಗ್ರನನ್ನು ಬಂಧಿಸಲಾಗಿದೆ.
ಸದ್ಯ ಸಿಸಿಬಿ ಪೊಲೀಸರು, ಆದಿಲ್ ಅಲಿಯಾಸ್ ಜುಬಾನನ್ನು ತಮಿಳುನಾಡಿನಿಂದ ಬೆಂಗಳೂರಿಗೆ ಕರೆ ತಂದು ವಿಚಾರಣೆ ಮಾಡುತ್ತಿದ್ದಾರೆ. ಇನ್ನು ಬೆಂಗಳೂರಿನಲ್ಲಿ ಅರೆಸ್ಟ್ ಆಗಿರುವ ಅಖ್ತರ್ ಹುಸೇನ್ ಜೊತೆ ಆತನ ತಮ್ಮ ಕೂಡ ರೂಂನಲ್ಲಿ ವಾಸವಿದ್ದ. ಆತನನ್ನು ಸಹ ಪೊಲೀಸರು ವಿಚಾರಣೆ ಮಾಡಿದ್ದಾರೆ. ಸದ್ಯ ರೂಂನಲ್ಲಿ ಅಖ್ತರ್ ಜೊತೆಯಿದ್ದ ನಾಲ್ವರು ಯುವಕರನ್ನೂ ವಿಚಾರಣೆ ಮಾಡಿ ವಾಪಸ್ ಕಳಿಸಿದ್ದಾರೆ.
ಇದನ್ನೂ ಓದಿ: ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಸಂಪಾದಿಸಲು ಚಾಣಕ್ಯನ ಈ ನಾಲ್ಕು ವಿಷಯ ಅನುಸರಿಸಿ
ಸಿಸಿಬಿ ಅಧಿಕಾರಿ ನೀಡಿದ ದೂರಿನನ್ವಯ ಅಖ್ತರ್ ಹುಸೇನ್ ವಿರುದ್ಧ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153A, 123, 121, 120B ಹಾಗೂ ಐಪಿಸಿ ಸೆಕ್ಷನ್ 15, 16, 18 UAPA ಅಡಿ ಪ್ರಕರಣ ದಾಖಲಾಗಿದೆ.
ಅಖ್ತರ್ ಹುಸೇನ್ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡಿಕೊಂಡಿದ್ದ. ಈತ ತಿಲಕ್ ನಗರದಲ್ಲಿ ವಾಸವಾಗಿದ್ದ. ಖಚಿತ ಮಾಹಿತಿ ಮೇರೆಗೆ ಆಧರಿಸಿ ವಶಕ್ಕೆ ಪಡೆಯಾಗಿದೆ. ಶಂಕಿತ ಉಗ್ರ ಲಷ್ಕರ್-ಎ-ತೈಬಾ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.
Published On - 8:42 am, Tue, 26 July 22